ಕುಶಾಲನಗರ, ಆ 29: ಕೊಡಗರಹಳ್ಳಿಯ ಶಾಂತಿನಿಕೇತನ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಮೇರಿ ಫ್ಯಾಟಿಮಾ ಅವರಿಗೆ ಬೆಸ್ಟ್ ಪ್ರಿನ್ಸಿಪಲ್ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಸೆ.5 ರ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರತೀ ವರ್ಷವೂ ಸಾಧಕ ಶಿಕ್ಷಕರಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಕೊಡಗು ಜಿಲ್ಲೆಯಿಂದ ಫ್ಯಾಟಿಮಾ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಸೆ.2 ರಂದು ಬೆಳಗ್ಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಭಾ ಅಕಾಡೆಮಿ ಅಧ್ಯಕ್ಷ ಶಂಕರ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Back to top button
error: Content is protected !!