ಕುಶಾಲನಗರ, ಮಾ 21: ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಆನಂದ್ ಕನ್ನಡಿಗ ಅವರ ತಂಡ ಸಾಮೂಹಿಕ ರಾಜೀನಾಮೆ ನೀಡಿದೆ.
ಕಳೆದ 6 ತಿಂಗಳಿನಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಂಘಟನೆಯೊಳಗಿನ ಆಂತರಿಕ ಬೆಳವಣಿಗೆಯಿಂದ ನೊಂದು ಹಾಗೂ ವೈಯಕ್ತಿಕ ಕಾರಣಗಳಿಂದ ಕರವೇ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಲಾಗಿದೆ ಎಂದು ಆನಂದ್ ಅವರು ತಿಳಿಸಿದ್ದಾರೆ.
ಇತ್ತೀಚಿಗೆ ಆಟೋ ಸ್ನೇಹಿತರು ಸೂಚಿಸಿದ ಹೋರಾಟದ ಕೂಗು ಸಂಘಟನೆಯಲ್ಲೂ ಮುಂದುವರೆಯುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಆನಂದ್ ಅವರೊಂದಿಗೆ ಮುರಳಿ, ರಾಕೇಶ್, ಡಿ.ಆರ್.ಯೋಗೇಶ್, ರವಿ ಡಿ.ಎನ್, ಜೈಸ್ವಾಮಿ, ಪವನ್ ಪಾಂಡುರಂಗ, ರವಿ, ಗೋಪಿ, ಸುನಿಲ್, ಮಂಜುನಾಥ್, ಮಮತ ಮತ್ತಿತರರು ರಾಜೀನಾಮೆ ನೀಡಿದ್ದಾರೆ.
Back to top button
error: Content is protected !!