ಕುಶಾಲನಗರ, ಆ 25: ಕಸ ಸಂಗ್ರಹ ವಾಹನದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ಪುರಸಭೆಯ ಕಸ ಸಂಗ್ರಹ ಆಟೋ ಟಿಪ್ಪರ್ ನಲ್ಲಿ ಪ್ಲಾಸ್ಟಿಕ್ ನಿಂದ ಸುತ್ತಿದ್ದ ಮೃತದೇಹ ಕಂಡುಬಂದಿದೆ. ಬೆಳಗ್ಗೆ 6.30 ಗಂಟೆಗೆ ಕಸ ಸಂಗ್ರಹ ಕಾರ್ಯ ಆರಂಭಿಸಿದ ಆಟೋ ಟಿಪ್ಪರ್ ಕುಶಾಲನಗರದ ಬೈಚನಹಳ್ಳಿ ವ್ಯಾಪ್ತಿಯ ಯೋಗಾನಂದ, ಭವಾನಿ, ಕಾವೇರಿ, ಅಂಬೇಡ್ಕರ್ ಬಡಾವಣೆಯಲ್ಲಿ ಕಸ ಸಂಗ್ರಹಿಸಿ ಹಳೆ ಮಾರುಕಟ್ಟೆಯಲ್ಲಿರುವ ಗೊಬ್ಬರ ತಯಾರಿಕೆ ಘಟಕದಲ್ಲಿ
ಕಸ ವಿಲೇವಾರಿ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಹುಟ್ಟಿ ಒಂದು ದಿನವಾದ ಮಗು ಮೃತಪಟ್ಟಿದ್ದು ದೇಹದಲ್ಲಿ ಯಾವುದೇ ಗಾಯದ ಕಲೆ ಕಂಡುಬಂದಿಲ್ಲ. ಕೂಡಲೆ ಕುಶಾಲನಗರ ಪೊಲೀಸ್ ಠಾಣೆಗೆ ಪುರಸಭೆ ಆರೋಗ್ಯ ನಿರೀಕ್ಷಕ ದೂರು ನೀಡಿದ್ದು ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿದ ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.
Back to top button
error: Content is protected !!