ಕುಶಾಲನಗರ, ಆ 25: ಕೂಡುಮಂಗಳೂರು ಗ್ರಾಪಂ ವತಿಯಿಂದ ಚಿಕ್ಕತ್ತೂರಿನ ಸಮುದಾಯ ಭವನದ ಆವರಣಕ್ಕೆ ಶೀಟ್ ಅಳವಡಿಕೆ ಮತ್ತು ವ್ಯಾಯಾಮ ಶಾಲೆ ಪ್ರಾರಂಭ ಕಾಮಗಾರಿಗೆ ಗ್ರಾಪಂ ಸದಸ್ಯರುಗಳು ಚಾಲನೆ ನೀಡಿದರು.
ರೂ 6 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಗೆ ಗ್ರಾಪಂ ಸದಸ್ಯರಾದ ದಿನೇಶ್, ಖತೀಜ, ಭಾಗ್ಯರವಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮಸ್ಥರ ಕೋರಿಕೆ ಮೇರೆಗೆ
ಗ್ರಾಮದಲ್ಲಿ ನಡೆಯುವ ಶುಭ ಸಮಾರಂಭಗಳು, ಹಬ್ಬ ಹರಿದಿನಗಳ ಸಾಮೂಹಿಕ ಆಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂದಾಜು ರೂ 6 ಲಕ್ಷ ವೆಚ್ಚದಲ್ಲಿ ಚಾವಣಿ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ. ಸಮುದಾಯ ಭವನ ಬಳಸಿಕೊಂಡು ವ್ಯಾಯಾಮ ಶಾಲೆ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ದೂರದ ಸ್ಥಳಗಳನ್ನು ಅವಲಂಬಿಸದೆ ಗ್ರಾಮದಲ್ಲಿಯೇ ಸಾಮೂಹಿಕ ಆಚರಣೆಗಳಿಗೆ ಈ ಸಮಯದಾಯ ಭವನ ಉಪಯೋಗಕ್ಕೆ ಬರಲಿದೆ ಎಂದು ಗ್ರಾಪಂ ಸದಸ್ಯ ದಿನೇಶ್ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಸಿ.ಸ್ವಾಮಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿದ ಸದಸ್ಯರುಗಳಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ತಾಪಂ ಮಾಜಿ ಸದಸ್ಯ ಗಣೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಗುಜೇಂದ್ರ, ಚಿಕ್ಕತ್ತೂರು ಡೇರಿ ಕಾರ್ಯದರ್ಶಿ ರಾಮು, ಪ್ರಮುಖರಾದ ಕುಮಾರಸ್ವಾಮಿ, ಕೃಷ್ಣ, ಉದಯಕುಮಾರ್, ರಾಧಾಕೃಷ್ಣ, ಶಿವಾನಂದ ರೈ, ಹೊನ್ನಣ್ಣ, ಮಾದಪ್ಪ, ನಿರ್ಮಲ, ಮಂಜುಳಾ, ಆನಂದ್, ಸುರೇಶ್, ಕೃಷ್ಣಕಾಂತ್, ತುಂಡು ಗುತ್ತಿಗೆದಾರ ಹರೀಶ್ ಮತ್ತಿತರರು ಇದ್ದರು.
Back to top button
error: Content is protected !!