ಕುಶಾಲನಗರ ಫೆ 28:ಕೊಡಗು ಜಿಲ್ಲಾ ವ್ಯಾಪ್ತಿಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ/ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಆರ್.ಮೋಹನ್ಕುಮಾರ್, ಡಿವೈಎಸ್ ಪಿ, ವಿರಾಜಪೇಟೆ ಉಪ ವಿಭಾಗ, ಶ್ರೀ ಶಿವರುದ್ರ,ಬಿ.ಎಸ್. ಸಿಪಿಐ, ವಿರಾಜಪೇಟೆ ವೃತ್ತ ಹಾಗೂ ಶ್ರೀ ಮಂಜುನಾಥ.ಸಿ.ಸಿ. ಪಿಎಸ್ಐ & ಶ್ರೀ ಎನ್.ಟಿ.ತಮ್ಮಯ್ಯ. ಪಿಎಸ್ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 28-02-2024 ರಂದು ಅಮ್ಮತ್ತಿಯ ಮುತ್ತಪ್ಪ ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿನ ಬಸ್ ನಿಲ್ದಾಣದ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕಳತ್ನಾಡು ಗ್ರಾಮ ಗೊಟ್ಟಡ ಕಾಲೋನಿ ನಿವಾಸಿಯಾದ ಸಚಿನ್.ಪಿ.ಎಸ್. 32 ವರ್ಷ ಎಂಬುವನನ್ನು 70 ಗ್ರಾಂ ಗಾಂಜಾ ನಿಷೇದಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
Back to top button
error: Content is protected !!