ಪ್ರಕಟಣೆ

ಕೂಡುಮಂಗಳೂರು ರಾಮೇಶ್ವರ ವಿವಿಧೋದ್ದೇಶ ಸಹಕಾರ ಸಂಘಕ್ಕೆ 70 ಲಕ್ಷ ನಿವ್ವಳ ಲಾಭ

ಆಗಸ್ಟ್ 26 ರಂದು 2022-23 ನೇ ಸಾಲಿನ ವಾರ್ಷಿಕ ಮಹಾಸಭೆ

ಕುಶಾಲನಗರ ಆ,14 ಕೂಡಿಗೆಯ ನಂ 242 ನೇ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ಈ ಸಾಲಿನಲ್ಲಿ ವಿವಿಧ ಹಂತಗಳಲ್ಲಿ ಸಂಘದ ಸದಸ್ಯರುಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸಂಘದ ರೈತರ ಪ್ರಗತಿಗೆ ಪೂರಕವಾದ ಯೋಜನೆಯನ್ನು ಹಮ್ಮಿಕೊಂಡು ಪ್ರಗತಿಯತ ಸಾಗುತ್ತಾ, ಈ ಸಾಲಿನಲ್ಲಿ 70 ಲಕ್ಷ 33 ಸಾವಿರದಷ್ಟು ಲಾಭಾಂಶದ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಂಘವು ಈ ಸಾಲಿನಲ್ಲಿ 281.22 ಲಕ್ಷ ಸದಸ್ಯರ ಪಾಲು ಬಂಡವಾಳವನ್ನು ಹೊಂದಿದ್ದು, ಇದರಲ್ಲಿ ಕೆ,ಸಿ, ಸಿ, ಸಾಲವಾಗಿ 6,ಕೋಟಿ, 10 ಲಕ್ಷ ದ 49 ಸಾವಿರದಷ್ಟು ರೈತರಿಗೆ ಸಾಲವನ್ನು ನೀಡಲಾಗಿದೆ. ಅದರಲ್ಲಿ ಕೃಷಿ ಮಧ್ಯಮಾವಧಿ ಸಾಲವಾಗಿ13.58.ಲಕ್ಷ, ಜಾಮೀನು ಸಾಲ 91 ಲಕ್ಷದ 51 ,ಸಾವಿರ, ನಿರಖು ಠೇವಣಿ14.43 .ಲಕ್ಷ, ಪಿಗ್ಮಿ ಠೇವಣಿ35 ಸಾವಿರ, ಸ್ವಸಹಾಯ ಗುಂಪುಗಳಿಗೆ 21.6 ಲಕ್ಷ, ಭವಿಷ್ಯ ನಿಧಿಗೆ 8.33 ಲಕ್ಷ, ಆಭರಣ ಸಾಲವಾಗಿ 1,ಕೋಟಿ25 ಲಕ್ಷ 73 ಸಾವಿರ, ವ್ಯಾಪಾರ ಅಭಿವೃದ್ಧಿಗೆ 2, ಕೋಟಿ 56,ದ 45 ಸಾವಿರ, ಪಿಗ್ಮಿ ಸಾಮಾನ್ಯ 13,ಕೋಟಿ, 56 ಲಕ್ಷ, ಸೇರಿದಂತೆ ಗೊಬ್ಬರ, ವ್ಯಾಪಾರ ಲಾಭ ಸೇರಿದಂತೆ ವಿವಿಧ ಬಗೆಯ ಅದಾಯದಿಂದಾಗಿ ಈ ಸಾಲಿನಲ್ಲಿ ಸಂಘಕ್ಕೆ 70 ಲಕ್ಷ 33 ಸಾವಿರದಷ್ಟು ಲಾಭಾಂಶವನ್ನು ಸಂಘವು ಗಳಿಸಿದೆ. ಇದರ ಜೊತೆಯಲ್ಲಿ ಸಂಘವು ” ಎ” ದರ್ಜೆಯ ಸ್ಧಾನ ಪಡೆದಿದೆ ಎಂದು ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಕೆ. ಕೆ ಹೇಮಂತ್ ಕುಮಾರ್ ಮಾಹಿತಿಯನ್ನು ನೀಡಿರುತ್ತಾರೆ.
2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು 26 ರಂದು ಸಂಘದ ಅಧ್ಯಕ್ಷ ಕೆ ಕೆ ಹೇಮಂತ್ ಕುಮಾರ್ ನವರ ಅಧ್ಯಕ್ಷತೆ ಯಲ್ಲಿ ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲ್ಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪಿ.ಮೀನಾ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!