ಕುಶಾಲನಗರ, ಅ 17: ಹೇಳಿಕೇಳಿ ಕೊಡಗು ಜಿಲ್ಲೆಯು ಮಾಂಸಪ್ರಿಯರ ತವರಾಗಿದ್ದು ಜಿಲ್ಲೆಯಲ್ಲಿ ಯಥೇಚ್ಛವಾಗಿ ಪ್ರತಿನಿತ್ಯ ಮಾಂಸ ಮೀನು ಮಾರಾಟವು ನೆರವೇರುತ್ತದೆ. ಕೊಡಗಿಗೆ ಆಗಮಿಸುವ ಪ್ರವಾಸಿಗರಂತೂ ಕೊಡಗಿನ ಮೀನು ಮತ್ತು ಮಾಂಸದೂಟಕ್ಕೆ ಮರುಳಾಗಿ ತಮಗೆ ಇಷ್ಟ ಬಂದಷ್ಟು ಸವಿದು ತಮ್ಮ ತಮ್ಮ ತವರೂರಿಗೆ ಮರಳುತ್ತಾರೆ.
ಅದರಂತೆಯೇ ಕುಶಲನಗರವು ಪ್ರತಿನಿತ್ಯ ಒಂದಿಲ್ಲೊಂದು ವಿಶೇಷತೆಗೆ ಹೆಸರುವಾಸಿಯಾಗುತ್ತಲೇ ಇದೆ. ಕೆಲವೊಂದು ಅದ್ಭುತಗಳನ್ನು ನಾವು ಈಗಾಗಲೇ ಕಂಡಿದ್ದೇವೆ. ಹಾಗೆಯೇ ಇಂದು ಬೆಳ್ಳಂಬೆಳಗ್ಗೆ ಕುಶಾಲನಗರ ಸಮೀಪದ ಮಾದಾಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದ ಶರೀಫ್ ಎಂಬುವವರ ಮಾಲಿಕತ್ವದ ” ಕೂರ್ಗ್ ಸೀ ಫುಡ್ ಫಿಷರೀಶ್ ” ನಲ್ಲಿ 8 ಅಡಿ ಎತ್ತರದ 30 ಕೆ.ಜಿ.ತೂಕದ ಓಲೆ ಮೀನು ಮಾರಾಟಕ್ಕೆಂದು ಬಂದಿದ್ದು ಈ ಬೃಹದಾಕಾರದ ಬಹಳ ಅಪರೂಪದ ಓಲೆ ಮೀನನ್ನು ನೋಡಿದ ನಾಗರಿಕರು ಮತ್ತು ಗ್ರಾಹಕರು ಆಶ್ಚರ್ಯ ಚಿತ್ತರಾಗುತ್ತಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮಾಂಸ ಮಾರಾಟಗಾರ ಆದಂ ಜಿಲ್ಲೆಯ ಜನತೆ ಮಾಂಸಪ್ರಿಯರು ಪ್ರತಿನಿತ್ಯ ಬಗೆ ಬಗೆಯ ವಿವಿಧ ಜಾತಿಯನ ಕರಾವಳಿ ಮೀನಿನ ರುಚಿಗೆ ಮಾರು ಹೋಗಿದ್ದೇವೆ. ವ್ಯಾಪಾರದಲ್ಲಿ ಪೈಪೋಟಿ ಇರುವ ಇಂತಹ ಸಂದರ್ಭದಲ್ಲಿ ದುಬಾರಿ ಬೆಲೆಯ ಇಂತಹ ರುಚಿಕರವಾದ ವಿಶಿಷ್ಟವಾದ ಮೀನನ್ನು ಮಾರುಕಟ್ಟೆಗೆ ತಂದು ಗ್ರಾಹಕರಿಗೆ ಉಣಬಡಿಸಲು ಅಂಗಡಿ ಮಾಲೀಕರಾದ ಶರೀಫ್ ರವರು ಮುಂದಾಗಿರುವುದು ತುಂಬಾ ಸಂತೋಷದಾಯಕ ಎಂದು ಇದೇ ಸಂದರ್ಭ ತಿಳಿಸಿದರು.
Back to top button
error: Content is protected !!