ಕುಶಾಲನಗರ, ಆ 09: ಚಿರತೆಯೊಂದು ಉರುಳಿಗಿ ಸಿಲುಕಿ ನರಳಾಡಿದ ಘಟನೆ ಹಾಸನ ಜಿಲ್ಲೆಯ ಹರಗಲ್ಲು ಅರಣ್ಯ ಪ್ರದೇಶದ ಕಂತೆಮಾರನಹಳ್ಳಿ ಕಾವಲು ಎಂಬಲ್ಲಿ ನಡೆದಿದೆ. ಅರಣ್ಯ ಸಮೀಪದ ಮನೆಯಿಂದ ನಾಯನ್ನು ಹಿಡಿದು ಕಾಡಿಗೆ ತೆರಳಿದ ಚಿರತೆ ಕಾಡಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿಕೊಂಡಿದೆ. ಸಾಕು ನಾಯಿಯನ್ನು ತಿಂದು ಮುಗಿಸಿ ಅರಣ್ಯ ದತ್ತು ತೆರಳುತ್ತಿದ್ದ ಸಂದರ್ಭ ಅರಣ್ಯದಲ್ಲಿ ಅಳವಡಿಸಿದ್ದ ಉರುಳಿಗೆ ಚಿರತೆ ಸಿಲುಕಿಕೊಂಡಿದೆ. ಚಿರತೆಯ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ಶಬ್ದಕ್ಕೆ ಮತ್ತಷ್ಟು ಬೆದರಿದ ಚಿರತೆ ಒದ್ದಾಡಿ ಉರುಳನ್ನು ಬಿಡಿಸಿಕೊಂಡು ಅರಣ್ಯದ ಓಡಿ ಪಾರಾಗಿದೆ. ಸ್ಥಳಕ್ಕೆ ಸ್ಥಳೀಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದ ಸಾಕುನಾಯಿ ಮೃತದೇಹ ಪತ್ತೆಯಾಗಿದೆ.
ಇದೇ ಚಿರತೆ ಕಳೆದ ಕೆಲವು ದಿನಗಳ ಹಿಂದೆ ಅಳುವಾರದಲ್ಲಿ ಮನೆಯ ಹಿಂದೆ ಕಟ್ಟಿದ್ದ ಆಡನ್ನು ಹಿಡಿದು ಸಾಯಿಸಿ ತಿಂದು ಮುಗಿಸಿದೆ.
ಹಾಸನ-ಕೊಡಗು ಗಡಿ ಭಾಗದಲ್ಲಿ ಸಂಚರಿಸುತ್ತಿರುವ ಈ ಚಿರತೆ ಆಗಾಗ್ಯೆ ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ಹಾವಳಿಯಿಂದ ಸಿದ್ದಲಿಂಗಪುರ, ಅಳುವಾರ, ಭೈರಪ್ಪನಗುಡಿ ವ್ಯಾಪ್ತಿಯ
ಗ್ರಾಮಸ್ಥರು ಭಯಭೀತರಾಗಿದ್ದಾರೆ.
Back to top button
error: Content is protected !!