ಕುಶಾಲನಗರ, ಆ 09: ಕೂಡಿಗೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಗಿರೀಶ್ ಕುಮಾರ್
ಉಪಾಧ್ಯಕ್ಷರಾಗಿ ಜಯಶ್ರೀ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾದ
ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ಕುಮಾರ್, ಅನಂತ್, ಅರುಣ್ ರಾವ್, ಶಿವಕುಮಾರ್ , ಹೆಚ್.ಎಸ್. ರವಿ ನಾಮಪತ್ರ ಸಲ್ಲಿಸಿದ್ದರು.
ಬಿಸಿಎಂ ಎ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಜಯಶ್ರೀ ನಾಮ ಪತ್ರ ಸಲ್ಲಿಸಿದ್ದರು.
ಹೆಚ್.ಎಸ್. ರವಿ ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಗಿರೀಶ್ ಕುಮಾರ್ ಮತ್ತು ಅನಂತ್, ಅರುಣ್ ರಾವ್, ಶಿವಕುಮಾರ್ ನಡುವೆ ಚುನಾವಣೆ ನಡೆಯಿತು.
15 ಸದಸ್ಯರ ಪೈಕಿ ಗಿರೀಶ್ ಕುಮಾರ್ ಗೆ 8 ಮತಗಳು, ಅನಂತ್ ಗೆ 7 ಮತಗಳು ಲಭಿಸಿದವು. ಒಂದು ಮತಗಳ ಅಂತರದಿಂದ ಗಿರೀಶ್ ಗೆಲುವು ಸಾಧಿಸಿದರು.
ಉಪಾಧ್ಯಕ್ಷೆಯಾಗಿ ಜಯಶ್ರೀ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯತಿಯ ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್, ಅನಂತ್, ಶಿವಕುಮಾರ್, ಮೋಹಿನಿ, ಹೆಚ್.ಎಸ್. ರವಿ, ಗಿರೀಶ್ ಕುಮಾರ್, ಜಯಶ್ರೀ, ವಾಣಿ, ಜಯಶೀಲಾ, ಚಂದ್ರು, ಮಂಗಳಾ, ಪಲ್ಲವಿ, ರತ್ನಮ್ಮ, ಲಕ್ಷ್ಮಿ, ಮತದಾನದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಜನಾ ದೇವಿ, ಕಾರ್ಯದರ್ಶಿ ಪುನೀತ್ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲ್ಲೂಕು ಅಧ್ಯಕ್ಷ ಮನುಕುಮಾರ್ ರೈ, ಉದ್ಯಮಿ ಕಿಶೋರ್ ಕುಮಾರ್, ಬಿಜೆಪಿ ಪ್ರಮುಖರಾದ ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಕೆ. ವರದ, ಗಣಿ ಪ್ರಸಾದ್, ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್, ಶಶಿಕುಮಾರ್, ಕೂಡಿಗೆ ವ್ಯಾಪ್ತಿಯ ಬಿಜೆಪಿ ಪ್ರಭಾರಿ ರವಿಕುಮಾರ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸೀಗೆಹೊಸೂರು ಜಗದೀಶ್, ಟೈಲರ್ ಕೃಷ್ಣ, ಜಿಮ್ಮಿ, ಸುಬ್ಬಯ್ಯ, ಆರ್.ಕೆ. ಕೃಷ್ಣ, ಕೇಶವ ರೈ, , ಮದಲಾಪುರ ಮಣಿ , ಬೋಪ್ಪಯ್ಯ, ಧರ್ಮರಾಜ್, ಶಕ್ತಿ ಕೇಂದ್ರದ ಅಧ್ಯಕ್ಷರು ಸೇರಿದಂತೆ ವಿವಿಧ ಘಟಕದ ಪ್ರಮುಖರು, ನೂರಾರು ಗ್ರಾಮಸ್ಥರು ಹಾಜರಿದ್ದರು.
ಈ ಸಂದರ್ಭದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ, ಗ್ರಾಮ ಪಂಚಾಯತಿಯಿಂದ ಕೂಡಿಗೆ ಸರ್ಕಲ್ ವರೆಗೆ ಮೆರವಣಿಗೆ ಸಾಗಿ ವಿಜಯೋತ್ಸವ ಆಚರಿಸಲಾಯಿತು.
Back to top button
error: Content is protected !!