ಕುಶಾಲನಗರ, ಆ.2: ಕೊಡಗು ಜಿಲ್ಲೆಯ
ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
(ಡಯಟ್)ಯ ಉಪ ನಿರ್ದೇಶಕ (ಅಭಿವೃದ್ಧಿ)ರೂ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಜುಲೈ ತಿಂಗಳ ಅಂತ್ಯಕ್ಕೆ ನಿವೃತ್ತಗೊಂಡ ಬಿ.ವಿ.ಮಲ್ಲೇಶಪ್ಪ ಅವರಿಗೆ ಕೂಡಿಗೆ ಡಯಟ್ ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ
ಆತ್ಮೀಯವಾಗಿ ಸನ್ಮಾನಿಸಿ
ಬೀಳ್ಕೊಡುಗೆ ನೀಡಲಾಯಿತು.
ಡಯಟ್ ಸಂಸ್ಥೆಯ ಉಪನ್ಯಾಸಕ ವೃಂದ, ಸಿಬ್ಬಂದಿ ಸೇರಿದಂತೆ ಜಿಲ್ಲಾ ಹಾಗೂ ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಾಗೂ ತಾಲ್ಲೂಕು ಸಹ ಶಿಕ್ಷಕರ ಸಂಘ ಮತ್ತು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ನಿವೃತ್ತಗೊಂಡ ಮಲ್ಲೇಶಪ್ಪ ಅವರಿಗೆ ಫಲತಾಂಬುಲ ನೀಡಿ ಶಾಲು ಹೊದಿಸಿ ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಬಿ.ವಿ.ಮಲ್ಲೇಶಪ್ಪ,
ತಾವು ಶಿಕ್ಷಣ ಇಲಾಖೆಯಲ್ಲಿ 37 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕೆಲಸ ಕಾರ್ಯಗಳಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ, ಸಹನೆ, ತಾಳ್ಮೆ ಅಧಿಕಾರದ
ಕುಟುಂಬದ ಸದಸ್ಯರಂತೆ ಕೆಲಸ ನಿರ್ವಹಿಸಿದರೆ
ಅಧಿಕಾರದಲ್ಲಿ ಅಹಂ ಎಂಬ ಮನೋಭಾವವನ್ನು ಬದಿಗೊತ್ತಿ ಎಲ್ಲರೊಂದಿಗೆ ಸಮನ್ವಯತೆ ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ತಮ್ಮ ಸೇವಾ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಬೆಂಬಲ ಮತ್ತು ಸಹಕಾರದಿಂದ ಮಾತ್ರ 37 ವರ್ಷಗಳ ಉತ್ತಮ ಸೇವೆಯನ್ನು ಪೂರ್ಣಗೊಳಿಸಲು ಸಾಧ್ಯ ಎಂದು ಹೇಳುವ ಮೂಲಕ ಕೆಲಸ ಮಾಡಿದ ಎಲ್ಲರಿಗೂ ಮಲ್ಲೇಶಪ್ಪ ಧನ್ಯವಾದಗಳನ್ನು ಅರ್ಪಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಿಡಿಪಿಐ ಸಿ.ರಂಗಧಾಮಯ್ಯ,
ಶಿಕ್ಷಣ ಇಲಾಖೆಯಲ್ಲಿ
ವಿವಿಧ ಸ್ತರದ ಹುದ್ದೆಗಳಲ್ಲಿ
ಅನ್ಯೋನ್ಯತೆಯಿಂದ ಕೆಲಸ ನಿರ್ವಹಿಸುವ ಮೂಲಕ ಇಲಾಖೆಯ ಪ್ರಗತಿಗೆ ಶ್ರಮಿಸಿರುವ ಮಲ್ಲೇಶಪ್ಪ ಅವರ ವೃತ್ತಿ ಜೀವನ ಮಾದರಿಯಾದುದು ಎಂದರು.
ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿ, ಸರಳ ವ್ಯಕ್ತಿತ್ವ ಹೊಂದಿರುವ ಮಲ್ಲೇಶಪ್ಪ ಅವರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರೇರಣೆ ನೀಡುತ್ತಿದ್ದರು. ಮಲ್ಲೇಶಪ್ಪ ಅವರ ಶಿಷ್ಯರಾದ ತಾವು ಅವರ ಸೂಕ್ತ ಸಲಹೆ, ಮಾರ್ಗದರ್ಶನದಿಂದ ತಾವು ಕೂಡ ಉತ್ತಮ ಸ್ಥಾನ ಹೊಂದಲು ಕಾರಣವಾಗಿದೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಇದೇ ವೇಳೆ ನಿವೃತ್ತಗೊಂಡ ಮಲ್ಲೇಶಪ್ಪ ದಂಪತಿಯನ್ನು ಡಯಟ್, ಬಿಇಓ ಕಛೇರಿಗಳು ಮತ್ತು ವಿವಿಧ ಶಿಕ್ಷಕರ ಸಂಘಟನೆಗಳಿಂದ
ಶಾಲು ಹೊದಿಸಿ ಸನ್ಮಾನಿಸಿ
ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್,
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ವಿ.ಸುರೇಶ್, ಡಾ ಬಿ.ಸಿ. ದೊಡ್ಡೇಗೌಡ, ಪ್ರಕಾಶ್,
ಡಯಟ್ ನ ಹಿರಿಯ ಉಪನ್ಯಾಸಕರಾದ ಶಿವಕುಮಾರ್, ಉಪನ್ಯಾಸಕ ಎಂ.
.ಕೃಷ್ಣಪ್ಪ,
ಮುಖ್ಯ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಸೋಮಯ್ಯ ಇತರರು ಮಾತನಾಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಬಿಆರ್ ಸಿ ವನಜಾಕ್ಷಿ, ಹಿರಿಯ ಉಪನ್ಯಾಸಕರಾದ
ನಿರುಪ್ ವೆಸ್ಲಿ, ಎಸ್.ಪಿ.ಮಹದೇವ್,
ಅಲ್ಹುಸ್ನಾ, ಗಾಯಿತ್ರಿದೇವಿ, ಬಿ ಆರ್ ಸಿ ವನಜಾಕ್ಷಿ,
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಿ.ಎನ್.ಪುಷ್ಪ, ಎಂ.ವಿ.ಮಂಜೇಶ್, ಕೆ.ಎಂ.ಅಯ್ಯಚ್ಚು, ನಿವೃತ್ತ ಉಪನ್ಯಾಸಕಿ ಬಿ.ಬಿ.ಸಾವಿತ್ರಿ,
ಶಿಕ್ಷಕರ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಡಯಟ್ ನ ಉಪನ್ಯಾಸಕರು ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಉಪನ್ಯಾಸಕ ಕೆ.ಜಿ.ನೀಲಕಂಠಪ್ಪ ,
ಉಪನ್ಯಾಸಕಿ ಕೆ.ಎಸ್.ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.
ಡಯಟ್ ಸಂಸ್ಥೆಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಶಿಕ್ಷಕರ ಸಂಘದ ಪ್ರತಿನಿಧಿಗಳು ಇದ್ದರು.
———————————
Back to top button
error: Content is protected !!