ಕುಶಾಲನಗರ, ಜು 28: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅತಿ ವೇಗದ ಚಾಲನೆ, ರಸ್ತೆಗಳಲ್ಲಿ ವೀಲಿಂಗ್, ಕರ್ಕಶ ಸೈಲೆನ್ಸರ್, ಹಾರನ್ ಅಳವಡಿಸಿ ಪ್ರಯಾಣಿಕರು, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ 10 ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಕಾಶಿನಾಥ್ ಬಗಲಿ, ಗೀತಾ ಅವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
Back to top button
error: Content is protected !!