ಕುಶಾಲನಗರ, ಜು 21: ಕುಶಾಲನಗರದ ಸಾಯಿ ಟಿಫಾನಿಸ್ ಗೆ ದಿನನಿತ್ಯ ಭೇಟಿ ನೋಡುವ ಜಾನುವಾರುಗಳು, ಅವುಗಳನ್ನು ಉಪಚರಿಸುವ ಹೋಟೆಲ್ ಮಾಲೀಕ, ಸಿಬ್ಬಂದಿಗಳ ಪಶುಪ್ರೇಮ ಹೋಟೆಲ್ ಗ್ರಾಹಕರನ್ನು ಚಕಿತಗೊಳಿಸುತ್ತಿದೆ.
ಸೀದಾ ಹೋಟೆಲ್ ಒಳಗೆ ಧಾವಿಸಿ ಕೌಂಟರ್ ಬಳಿ ನಿಲ್ಲುವ ಈ ಜಾನುವಾರು ಇಡ್ಲಿ, ದೋಸೆ ತಿನ್ನುವ ಪರಿಪಾಠ ಬೆಳೆಸಿಕೊಂಡಿದೆ. ಸಿಬ್ಬಂದಿಗಳು ಕೂಡ ಜಾನುವಾರುಗಳು ಒಳಗೆ ಬಂದರೆ ತಕರಾರು ಮಾಡದೆ ಆಹಾರ ಉಣಬಡಿಸಿ ಕಳುಹಿಸಿಕೊಡುವುದು ನೋಡುಗರನ್ನು ಚಕಿತಗೊಳಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕರು ಹಾಗೂ ಹಸು ಪ್ರತಿನಿತ್ಯ ಹೋಟೆಲ್ ಗೆ ಆಗಮಿಸಿ ಆಹಾರ ತಿಂದು ತೆರಳುವ ಅಭ್ಯಾಸ ರೂಡಿಸಿಕೊಂಡಿದೆ ಎನ್ನುತ್ತಾರೆ ಹೋಟೆಲ್ ಮಾಲೀಕ ವಿನಯ್.
Back to top button
error: Content is protected !!