ಸನ್ಮಾನ

ಮುಳ್ಳುಸೋಗೆ ಕನ್ನಂಬಾಡಮ್ಮ ದೇವರ ಮಂಡಲಪೂಜೊತ್ಸವ ದೇವಾಲಯ ಸಮಿತಿ ಪದಾಧಿಕಾರಿಗಳಿಗೆ ಗ್ರಾಮಸ್ಥರಿಂದ ಸನ್ಮಾನ

ಕುಶಾಲನಗರ, ಏ 09 : ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅರ್ಚಕ ಕೃಷ್ಣಮೂರ್ತಿ ಭಟ್ ಮುಂಜಾನೆಯಿಂದ ದೇವಾಲಯದಲ್ಲಿ ಧಾರ್ಮಿಕ ವಿಧಿ ಪೂರೈಸಿದರು.
ಮಧ್ಯಾಹ್ನ ಕನ್ನಂಬಾಡಮ್ಮ ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು.
ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನೆರೆದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿ ವತಿಯಿಂದ ಅನ್ನದಾನ ನೆರವೇರಿತು.
ಇದೇ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ಸಮಿತಿಯ ಪದಾಧಿಕಾರಿಗಳನ್ನು ಗ್ರಾಮಸ್ಥರ ವತಿಯಿಂದ ಎಂ.ಷಣ್ಮುಖಂ ಹಾಗೂ ಎಂ.ಹೆಚ್.ಚಂದ್ರಪ್ಪ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯರಾದ ಎಂ.ಕೆ.ರಾಜು, ದೇವಾಲಯ ಸಮಿತಿ ಅಧ್ಯಕ್ಷರಾದ ಎಂ.ಹೆಚ್.ಅಣ್ಣೇಗೌಡ, ಉಪಾಧ್ಯಕ್ಷ ಎಂ..ಆರ್.ನಂಜುಂಡ, ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕರಾದ ಎಂ.ಪಳನಿಸ್ವಾಮಿ, ಎಂ.ಟಿ.ರಘು, ಎಂ.ಆರ್.ಮಹದೇವಪ್ಪ, ಎಂ.ಸಿ.ಸಂತೋಷ್, ಎಂ.ಹೆಚ್.ಚಂದ್ರಪ್ಪ, ವಿ.ಎ.ದಿನೇಶ್, ಎಂ.ಕೆ.ಚಂದ್ರು, ಎಂ.ಬಿ.ಸುರೇಶ್, ಎಂ.ಎಸ್.ಪ್ರಸನ್ನ, ರಂಗಸ್ವಾಮಿ ಇದ್ದರು.
ದೀಪ ಹಾಗೂ ದಿವ್ಯ ಸ್ವಾಗತಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!