ಕುಶಾಲನಗರ, ಜು 07: ಕಾಡಾನೆ ದಾಳಿಗೆ ಕೊಡಗರಹಳ್ಳಿಯ ಬಿಬಿ ಪ್ಲಾಂಟೇಷನ್ ಗೆ ಸೇರಿದ ಗೇಟ್ ಧ್ವಂಸಗೊಂಡಿದೆ. ದೃಢಕಾಯ ಕಾಡಾನೆಯೊಂದು ಈ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ದು ಉಪಟಳ ಹೆಚ್ಚಾಗಿದೆ. ಇದೀಗ ಎಸ್ಟೇಟ್ ಗೆ ಸೇರಿದ ಗೇಟ್ ಅನ್ನು ಕಾಡಾನೆ ಧ್ವಂಸ ಮಾಡಿದೆ.