ಪ್ರಕಟಣೆರಾಜಕೀಯ

ಪಕ್ಷದಲ್ಲಿ ದುಡಿದವರಿಗೆ‌ ಮಾತ್ರ ಸರಕಾರದಿಂದ ನಾಮನಿರ್ದೇಶನ: ಅವಕಾಶವಾದಿಗಳಿಗೆ ಜಾಗವಿಲ್ಲ

ಎಲ್ಲಾ ವರ್ಗದ ಅಭಿವೃದ್ಧಿ ಪರ ಬಜೆಟ್: ತೀತಿರ ಧರ್ಮಜ‌ ಉತ್ತಪ್ಪ.

ಕುಶಾಲನಗರ, ಜು 08: ಕಾಂಗ್ರೆಸ್ ನ ಈ ಬಾರಿಯ ಬಜೆಟ್ ಎಲ್ಲಾ ವರ್ಗದ ಪರವಾದ ಜನಪರ ಬಜೆಟ್ ಎಂದು ಕೊಡಗು‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ‌ ಉತ್ತಪ್ಪ ಹರ್ಷ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು‌ ಮಂಡಿಸಿದ ಬಜೆಟ್ ಎಲ್ಲಾ ವರ್ಗದ ಅಭಿವೃದ್ದಿಗೆ ಪೂರಕವಾಗಿದೆ. ಕೊಡಗು ಜಿಲ್ಲೆಯ ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಒತ್ತು‌ ನೀಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ಪ್ರಯತ್ನದಿಂದ ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್ ಮಾತನಾಡಿ, ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸರಕಾರದ ನಾಮನಿರ್ದೇಶನವನ್ನು ರ್ದೇಶನಗಳಿಗೆ ಆದ್ಯತೆ ನೀಡುವಂತೆ ತೀರ್ಮಾನಿಸಲಾಗಿದೆ. ಪಕ್ಷಕ್ಕೆ ಸೇರ್ಪಡೆಯಾದವರಿಗೆ ಪಕ್ಷದೊಳಗೆ ಸ್ಥಾನಮಾನ ಲಭಿಸಲಿದೆ. ಅವಕಾಶವಾದಿಗಳಿಗೆ ಈ ಬಾರಿ ಯಾವುದೇ ಸ್ಥಾನ‌ಮಾನ‌ ಲಭಿಸುವುದಿಲ್ಲ ಎಂದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಒತ್ತಾಯಗಳು‌ ಕೇಳಿಬಂದಿದ್ದು, ಕುಶಾಲನಗರ ಸಮೀಪದ ಕೂಡಿಗೆ ಬಳಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ‌ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದೆ. ತಾಲೂಕು ಆಸ್ಪತ್ರೆಯಾಗಿಸುಲ್ಲಿ‌‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ನಿರ್ಮಾಣಗೊಂಡಲ್ಲಿ‌ ಹೆಚ್ಚಿನ ಅನುಕೂಲವಾಗಲಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾವ್ ಹೆಸರಿನಲ್ಲಿ ಆಸ್ಪತ್ರೆ ಸ್ಥಾಪನೆಗೆ‌ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ವಕ್ತಾರ ಟಾಟು‌ಮೊಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಸತೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!