ಕುಶಾಲನಗರ, ಜೂ 24: ನಂದಿನಿ ರಿಟೇಲ್ ದಾರರು ಹಾಲು, ಮೊಸರು ಮಾರುವುದರ ಜೊತೆಗೆ ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದರೆ ಸಹಕಾರ ಸಂಘಕ್ಕೆ ಹೆಚ್ಚಿನ ಅದಾಯ ಬರಲು ಸಹಕಾರಿಯಾಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಗೋಪಾಲಯ್ಯ ತಿಳಿಸಿದರು.
ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಾಲು ಒಕ್ಕೂಟದ ವತಿಯಿಂದ ಕೂಡಿಗೆ ಡೇರಿ (ಹಾಸನ ಮತ್ತು ಕೊಡಗು ಜಿಲ್ಲೆ) ವ್ಯಾಪ್ತಿಗೆ ಬರುವ
ನಂದಿನಿ ರಿಟೇಲ್ ದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಿಟೇಲುದಾರರ ಕುಂದು ಕೊರತೆಗಳು, ಹಾಲು ಮತ್ತು ಉತ್ಪನ್ನಗಳ ಮಾರಾಟ, ಗುಣಮಟ್ಟ ಹಾಗೂ ಲಭ್ಯತೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ ಅವರು, ನಮ್ಮ ಕರ್ನಾಟಕ ಅಲ್ಲದೇ ಆಂಧ್ರಪ್ರದೇಧ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿಯೂ ಸಹ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
ನಂದಿನಿ ಹಾಲಿನ ರಿಟೇಲ್ ದಾರರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಪ್ರತಿ ವರ್ಷ ರಿಟೇಲ್ ದಾರರ ಮೀಟಿಂಗ್, ಪ್ರವಾಸ, ಆರೋಗ್ಯ ವಿಮೆ, ಹಾಲಿನ ಉತ್ಪನ್ನಗಳನ್ನು ಮಧ್ಯಾಹ್ನ ಕಳಿಹಿಸಿಕೊಡಲು ಮನವಿ, ಹಾಲಿನ ಲಾರಿ ಸರಿಯಾದ ವೇಳೆಗೆ ಹಾಲು, ಮೊಸರು ಮತ್ತು ಉತ್ಪನ್ನಗಳನ್ನು ಸಕಾಲದಲ್ಲಿ ತಲಪಿಸುವುದು, ಕ್ರೇಟ್ ಗಳಲ್ಲಿ ಲಿಕಾದ ಹಾಲನ್ನು ಮತ್ತೆ ಸ್ಥಳಗಳಲ್ಲಿ ಕೊಡಿಸಲು ಸಭೆಯಲ್ಲಿ ಮನವಿ ಮಾಡಿದರು.
ಹಾಸನ ಹಾಲು ಉಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಪ್ರಿಯರಂಜನ್, ನಿರ್ದೇಶಕ ಹೇಮಂತ್ ಕುಮಾರ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಉಪ ವ್ಯವಸ್ಥಾಪಕ ಮಲ್ಲೇಶ್ ಮುಂತಾದವರಿದ್ದರು.
Back to top button
error: Content is protected !!