ಕುಶಾಲನಗರ, ಜೂ 26 ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ (ಲ್ಯಾಂಪ್ಸ್) ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ನ ಅರುಣ್ ರಾವ್ ಆಯ್ಕೆಯಾದರು.
ಅಧ್ಯಕ್ಷರ ರಾಜಿನಾಮೆ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ
ಸೋಮವಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ 11 ಮತಗಳ ಪೈಕಿ
ಕಾಂಗ್ರೆಸ್ ನ ಅರುಣ್ ರಾವ್ ಅವರು 7, ಬಿಜೆಪಿಯ ಸುರೇಶ್ ಅವರು 4 ಮತಗಳನ್ನು ಪಡೆಯುವ ಮೂಲಕ ಅರುಣ್ ರಾವ್ ಮುಂದಿನ 19 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಚುನಾಯಿತರಾದರು.
ನಂತರ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ವಿಜಯೋತ್ಸವ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಅಭಿನಂದಿಸಲಾಯಿತು.
ಈ ಬಗ್ಗೆ ಮಾತನಾಡಿದ ವಿ.ಪಿ.ಶಶಿಧರ್, ವಿಧಾನಸಭಾ ಚುನಾವಣೆ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಶಾಸಕ ಡಾ.ಮಂಥರ್ ಗೌಡ ಸೇರಿದಂತೆ ಕಾಂಗ್ರೆಸ್ ಪ್ರಮುಖರ ಗೆಲುವಿನ ತಂತ್ರದಿಂದ ಬಿಜೆಪಿ ಬಹುಮತವಿದ್ದರೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಬಿಜೆಪಿ ಪತನದ ಹಾದಿಯ ದಿಕ್ಸೂಚಿ. ಮುಂದಿನ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ನ ವಿಜಯದ ನಾಗಾಲೋಟ ಮುಂದುವರೆಯಲಿದೆ ಎಂದರು.
ನೂತನ ಅಧ್ಯಕ್ಷ ಅರುಣ್ ರಾವ್ ಮಾತನಾಡಿ, ಇರುವ ಅಲ್ಪ ಅವಧಿಯಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್, ಲ್ಯಾಂಪ್ಸ್ ನಿರ್ದೇಶಕರಾದ ಉದಯಕುಮಾರ್, ಮಾಜಿ ನಿರ್ದೇಶಕ ಕಾಳಿಂಗ, ಗಿರಿಜನ ಮುಖಂಡ ಪ್ರಕಾಶ್, ಸ್ವಾಮಿಯಪ್ಪ, ಮಂಜು, ಕೂಡಿಗೆ ಗ್ರಾಪಂ ಸದಸ್ಯ ಅನಂತ್, ಶಿವಕುಮಾರ್, ಮಾಜಿ ಸದಸ್ಯ ಕೃಷ್ಣ, ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ರಾವ್, ಕಾಂಗ್ರೆಸ್ ಕಿಸಾನ್ ಘಟಕದ ನವೀನ್ ಗೌಡ, ಪ್ರಮುಖರಾದ ಅರುಣ್ ಮಾದಪ್ಪ ಮತ್ತಿತರರು ಇದ್ದರು.
Back to top button
error: Content is protected !!