ಕುಶಾಲನಗರ, ಸೆ 10:ಕುಶಾಲನಗರದ ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಜೆಸಿಐ ವೀಕ್ ಅಂಗವಾಗಿ 2ನೇ ದಿನದ ‘Empower of Horizon’ ಕಾರ್ಯಕ್ರಮವನ್ನು ಇಂದು ಕುಶಾಲನಗರದ ಕೆ.ಬಿ. ಕಾಲೇಜು ಹಾಗೂ ಅನುಗ್ರಹ ಕಾಲೇಜುಗಳಲ್ಲಿ ನಡೆಸಲಾಯಿತು. ಒಟ್ಟು 220 ಕ್ಕೂ ಹೆಚ್ಚು ಬಿಸಿಎ ಮತ್ತು ಬಿಕಾಂ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಸಿಐ ತೇಜಾ ದಿನೇಶ್, ಅಧ್ಯಕ್ಷರು ಕುಶಾಲನಗರ ಕಾವೇರಿ ಇವರು ವಿದ್ಯಾರ್ಥಿಗಳಿಗೆ ಜೆಸಿಐ ಕ್ಯಾಂಪೇನ್ ಕುರಿತಾಗಿ ಪರಿಚಯ ನೀಡಿ, ಸಮಾಜಮುಖಿ ಕಾರ್ಯಗಳಲ್ಲಿ ಯುವಕರ ಪಾತ್ರವನ್ನು ಹಂಚಿಕೊಂಡರು.
ಜೆ ಫ್ ಮ್ ರಂಗಸ್ವಾಮಿ ಎಂ.ಡಿ., ಪಾಸ್ಟ್ ಜೆಎಸಿ ಚೇರ್ಮನ್ – ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ್ಯಗಳ ಅಗತ್ಯವನ್ನು ಹಿತವಚನಗಳ ಮೂಲಕ ತಿಳಿಸಿದರು.
ರಜನಿಕಾಂತ್ ಎಂ.ಜೆ., ವಲಯ 14ರ ಮೀಡಿಯಾ ಕೋಆರ್ಡಿನೇಟರ್ ರವರು ಇಂದಿನ ತಲೆಮಾರಿಗೆ ಅತ್ಯಂತ ಮುಖ್ಯವಾದ ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ಸಾಕ್ಷರತೆ ಕುರಿತು ಮಾಹಿತಿ ತುಂಬಿದ ತರಬೇತಿ ನೀಡಿ, ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ತಾವು ಹೇಗೆ ತಯಾರಾಗಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಪ್ರಶ್ನೋತ್ತರಗಳಲ್ಲಿ ಚುರುಕಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಸಕ್ರಿಯ ಹಾಗೂ ಅರ್ಥಪೂರ್ಣವಾಗಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜು ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಜೆಸಿಐ ಕುಶಾಲನಗರ ಕಾವೇರಿ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ದಾರಿದೀಪವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
Back to top button
error: Content is protected !!