ಕುಶಾಲನಗರ, ಜೂ 02: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ಜಯಂತಿ ಆಚರಣೆ ನಡೆಯಿತು.
ಜಯಂತಿ ಅಂಗವಾಗಿ ದೇವಾಂಗ ಸಂಘದ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ ನಂತರ ಕಾವೇರಿ ನದಿಯಿಂದ ಕಳಸ ತರಲಾಯಿತು. ವೀರಗಾಸೆ ಸಮ್ಮುಖದಲ್ಲಿ ಮಂಗಳವಾದ್ಯದೊಂದಿಗೆ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕಳಸ ತರಲಾಯಿತು.
ನಂತರ ದೇವಿಗೆ ಪೂಜಾ ವಿಧಿಗಳ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಅರ್ಚಕ ಪ್ರಸನ್ನ ಭಟ್ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು.
ಸಂಘದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ದೇವಾಂಗ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಿ.ರಾಜೇಶ್ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಡಿ.ಆರ್.ಸೋಮಶೇಖರ್, ಡಿ.ವಿ.ಚಂದ್ರು, ಪ್ರಧಾನ ಕಾರ್ಯದರ್ಶಿ ಡಿ.ಆರ್.ಕೃಷ್ಣಕುಮಾರ್, ಖಜಾಂಚಿ ಡಿ.ಜಿ.ಪ್ರದೀಪ್, ಸಹ ಕಾರ್ಯದರ್ಶಿ ಡಿ.ವಿ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ.ಎನ್.ವಿನೋದ್, ಸಂಚಾಲಕ ಡಿ.ಎನ್.ಶಶಿ, ಪ್ರಮುಖರಾದ ಡಿ.ಎಸ್.ಜಗದೀಶ್, ಡಿ.ಎಸ್.ಕೋದಂಡರಾಮು, ಡಿ.ಟಿ.ನಾಗೇಂದ್ರ, ಡಿ.ಕೆ.ತಿಮ್ಮಪ್ಪ, ಡಿ.ಸಿ.ಜಗದೀಶ್, ಎಚ್.ಎನ್.ಯೋಗೇಶ್, ಕೆ.ಎಸ್.ಮೇಘರಾಜ್, ಮಾಜಿ ಅಧ್ಯಕ್ಷ ಡಿ.ಟಿ.ವಿಜಯೇಂದ್ರ, ಮಹಿಳಾ ಮಂಡಳಿ ಅಧ್ಯಕ್ಷೆ ಪದ್ಮಾ ಮಹೇಶ್, ಪ್ರಧಾನ ಕಾರ್ಯದರ್ಶಿ ಶೋಭಾ ಅನಿಲ್, ಉಪಾಧ್ಯಕ್ಷೆ ಶುಭ ರವಿಕುಮಾರ್, ಯುವ ಸಂಘದ ಅಧ್ಯಕ್ಷ ಯತಿರಾಜ್, ಉಪಾಧ್ಯಕ್ಷ ಮಧು, ಪ್ರಧಾನ ಕಾರ್ಯದರ್ಶಿ ಗಣೇಶ್, ಖಜಾಂಚಿ ಲಿಖಿತ್, ಪ್ರಮುಖರಾದ ರೂಪಾ ಕುಮಾರ್, ಗೀತಾ ಸೋಮಶೇಖರ್ ಸೇರಿದಂತೆ ಸಂಘದ ನಿರ್ದೇಶಕರು, ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.
Back to top button
error: Content is protected !!