ಕುಶಾಲನಗರ, ಜೂ 03: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾರ್ಯಸೂಚಿಗಳ ಬಗ್ಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಪುರಸಭೆ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರ ನೇತೃತ್ವದಲ್ಲಿ ಗುಂಡುರಾವ್ ಬಡಾವಣೆಯಲ್ಲಿ ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಯ ಘಟಿನೋತ್ತರ ಮಂಜೂರಾತಿ ನೀಡುವ ಬಗ್ಗೆ, ನೀರು ಸರಬರಾಜು ಕಲ್ಪಿಸುವ ಟೆಂಡರ್ ರದ್ದು ಗೊಳಿಸಿ ಮರು ಟೆಂಡರ್ ಕರೆಯುವ ಬಗ್ಗೆ, ನಿವೇಶನಗಳ ಹರಾಜು ನಡೆಸುವ ಬಗ್ಗೆ, ಸರ್ವೆ ನಂ 28 ರ ದಾವೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅಧಿಕಾರಿ ವರ್ಗದವರೊಂದಿಗೆ ಚರ್ಚೆ ನಡೆಯಿತು.
ಈ ಸಂದರ್ಭ ಉಪವಿಭಾಗಾಧಿಕಾರಿ ಡಾ. ಯತೀಶ್ ಉಲ್ಲಾಳ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸಪ್ಪ, ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಂತ್ ಕುಮಾರ್, ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಕುಡಾ ಸದಸ್ಯ ಕಾರ್ಯದರ್ಶಿ, ಪಿಡ್ಬ್ಲ್ಯುಡಿ ಇಲಾಖೆ ಸಹಾಯಕ ಅಭಿಯಂತರ ಮತ್ತು ಅಧಿಕಾರಿ ವರ್ಗದವರು ಇದ್ದರು.
Back to top button
error: Content is protected !!