ಕುಶಾಲನಗರ,ಮೇ 31: ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಲಿಯೋ ಲೆಜೆಂಡ್ಸ್ ಕ್ಲಬ್ ವತಿಯಿಂದ ಕಳೆದ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಅಗ್ರಗಣ್ಯ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.
ಕುಶಾಲನಗರದ ಮೈಸೂರು ರಸ್ತೆಯಲ್ಲಿ ಅಪೋಲೋ ಟಯರ್ ಸಂಸ್ಥೆಯನ್ನು ನಡೆಸುತ್ತಿರುವ ಅಮ್ಜೆದ್ ಹುಸೇನ್ ಅವರು ತಮ್ಮ ವಿದ್ಯಾರ್ಥಿ ಜೀವನದ ಸಮಾನ ಮನಸ್ಕ ಸಹಪಾಠಿಗಳನ್ನು ಸೇರಿಸಿ ಲಿಯೋ ಲೆಜೆಂಡ್ಸ್ ಕ್ಲಬ್ ಎಂಬ ಹೆಸರಿನಲ್ಲಿ ಕಳೆದ 40 ವರ್ಷಗಳಿಂದ ಆರಂಭಿಸಿರುವ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಜಾತಿ ಹಾಗೂ ಧರ್ಮರಹಿತವಾದ ಸೇವೆಗಳನ್ನು ಪ್ರತೀ ವರ್ಷ ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿಯಲ್ಲಿ ಈ ಬಾರಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಅಧ್ಯಕ್ಷ ನರಹರಿ ಜೋಯಿಸ್ ಹೇಳಿದರು.
ಲಿಯೋ ಲೆಜೆಂಡ್ಸ್ ಕ್ಲಬ್ ವತಿಯಿಂದ ಉಚಿತ ರಕ್ತದಾನ ಶಿಬಿರ, ಕಣ್ಣು ಪರೀಕ್ಷಾ ಶಿಬಿರ, ವಾಹನ ಚಾಲಕರಿಗೆ ಸುಗಮ ವಾಹನ ಸಂಚಾರಕ್ಕೆ ಮಾಹಿತಿ ಶಿಬಿರ ಹೀಗೆ ಅನೇಕ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಕ್ಲಬ್ ಅಧ್ಯಕ್ಷ ಅಮ್ಜೆದ್ ಹುಸೇನ್ ಹೇಳಿದರು.
ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರೀವಿದ್ಯಾ, ಕೆ.ಹೆಚ್.ಫಯಾಜ್, ನಿಜಾಮ್ ಎಂಬ ಮೂರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಡಾ.ಪಾರ್ಥಸಾರಥಿ, ಗುಣಶೀಲಾ, ಮಂಜುನಾಥ್, ನಿದಹುಸೇನ್, ಶ್ರೀಕಂಠ ಸ್ವಾಮಿ ಮೊದಲಾದವರಿದ್ದರು.
Back to top button
error: Content is protected !!