ಕುಶಾಲನಗರ, ಫೆ 13: ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೇವೇಗೌಡನಕೊಪ್ಪಲು ಗ್ರಾಮದಲ್ಲಿರುವ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜೆ, ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಹಾಗೂ ಶ್ರೀ ಡಾ, ಬಾಲಾ ಗಂಗಾಧರನಾಥ ಸ್ವಾಮಿಗಳಿಗೆ ನುಡಿ ನಮನ ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ಫೆ. 18 ರಂದು ನಡೆಯಲಿದೆ ಎಂದು ಶ್ರೀ ಶನೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೆ. ಎಸ್. ಕೃಷ್ಣೇಗೌಡ ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
18 ರಂದು ಬೆಳಿಗ್ಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ 8 ಗಂಟೆಗೆ ಗಣಪತಿ ಹೋಮ, ನವಗ್ರಹ ಪೂಜೆ, ವಿವಿಧ ಅಭಿಷೇಕ ಸೇರಿದಂತೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ನೆರವೇರಿಸಲ್ಲಿದ್ದಾರೆ. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮಿ , ಶ್ರೀ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮಿ, ವಿರಕ್ತ ಮಠ ಬಸವಾಪಟ್ಟಣದ ಶ್ರೀ ಬಸವಲಿಂಗ ಸ್ವಾಮಿ ದಿವ್ಯ ಸಾನಿದ್ಯವನ್ನು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗತ್ತೂರು ಗ್ರಾಮದ ಓರಿಯಂಟಲ್ ಇನ್ ಶ್ಯೂರೇನ್ಸ್ ಕಂಪನಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಸಿ, ಎ, ಮಾದಪ್ಪ, ಸೇರಿದಂತೆ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಕಾಂಗ್ರೆಸ್ ಮುಖಂಡ ಡಾ , ಮಂಥರ್ ಗೌಡ, ಸೇರಿದಂತೆ ಸ್ಥಳೀಯ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪ್ರತಿಭಾವಿಂತ ವಿದ್ಯಾರ್ಥಿಗಳನ್ನು ಗ ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಚಲನಚಿತ್ರ ಸಹಕಲಾವಿದರಾದ ಕುಮಾರ್ ಅರಸೆಗೌಡ ಮಿತ್ರ ಬಳಗದ ವತಿಯಿಂದ ಮಿಸ್ಟರ್ ಗುಂಡಣ್ಣ ಎಂಬ ಹಾಸ್ಯ ಬರಿತ ನಗೆ ನಾಟಕವನ್ನು ಅಭಿನಯಿಸಲಿದ್ದಾರೆ ಎಂದು ಕೃಷ್ಣೇಗೌಡ ತಿಳಿಸಿದರು
ಗೋಷ್ಠಿಯಲ್ಲಿ ಕುಶಾಲನಗರ ಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಟಿ , ಬಿ, ಜಗದೀಶ್, ತೊರೆನೂರು ಕಾಂಗ್ರೆಸ್ ಮುಖಂಡ ಟಿ ಎಂ, ಮೋಹನ್, ಹಾಜರಿದ್ದರು.
Back to top button
error: Content is protected !!