ಕುಶಾಲನಗರ, ಫೆ 01: ಜಿಲ್ಲೆಯ ಪ್ರವಾಸಿ ಕೇಂದ್ರ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ ಹಾರಂಗಿ ನಡುವಿನ 8.ಕಿಲೋಮೀಟರ್ ರಸ್ತೆಯನ್ನು ನೀರಾವರಿ ಇಲಾಖೆ ವತಿಯಿಂದ ರೂ.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು,ಮಂಗಳವಾರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.18.5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಗುಮ್ಮನಕೊಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮಾತನಾಡಿದ ಶಾಸಕರು ನೀರಾವರಿ ಸಚಿವರು ತಮ್ಮ ಕೋರಿಕೆ ಮೇರೆಗೆ ರೂ.10 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು,ಈ ಅನುದಾನದಿಂದ 8.ಕಿ.ಮೀ.ದೂರ ಹಾಗೂ 7.5 ಮೀಟರ್ ಅಗಲವಾದ ರಸ್ತೆ ನಿರ್ಮಾಣವಾಗಲಿದೆ.ಈ ರಸ್ತೆಯ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ನೀಡಬೇಕು.ಅದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.
ಕುಶಾಲನಗರ ಪಟ್ಟಣದ ನದಿ ದಂಡೆಯ ಬಡಾವಣೆಗಳಲ್ಲಿ ನದಿ ಪ್ರವಾಹ ತಡೆಗಟ್ಟಲು ನೀರಾವರಿ ಇಲಾಖೆ ವತಿಯಿಂದ 7 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ
ನಾಕೂರು ಶಿರಂಗಾಲ ರಸ್ತೆ ಅಭಿವೃದ್ಧಿ ರೂ.1.50 ಕೋಟಿ,ಕಂಬಿಬಾಣೆ ರಸ್ತೆ ಅಭಿವೃದ್ಧಿಗೆ ರೂ.1.50 ಕೋಟಿ,
ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ರಸ್ತೆ ಅಭಿವೃದ್ಧಿಗೆ ರೂ.3 ಕೋಟಿ, ಹೆಬ್ಬಾಲೆ ರಸ್ತೆ ಕಾಮಗಾರಿ ರೂ.30 ಲಕ್ಷ,ಕೂಡಿಗೆ ಸುಬ್ರಹ್ಮಣ್ಯ ರಸ್ತೆ ರೂ.70 ಲಕ್ಷ, ಕೂಡುಮಂಗಳೂರು ನವಗ್ರಾಮ ರಸ್ತೆ ರೂ.50 ಲಕ್ಷ,ಮುಳ್ಳುಸೋಗೆ ಗೊಂದಿಬಸವನಹಳ್ಳಿ ರಸ್ತೆ ರೂ.50 ಲಕ್ಷ,
ಬೈರಪ್ಪನಗುಡಿ ರಸ್ತೆ ಅಭಿವೃದ್ಧಿ ರೂ.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ರಂಜನ್ ತಿಳಿಸಿದರು.
ಮುಳ್ಳುಸೋಗೆ ಹಾಗೂ ತೊರೆನೂರು ಗ್ರಾಮದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ ಮಾಡಿದರು.ಜೊತೆಗೆ ಆಯುಷ್ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ರಘುಪತಿ,ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ,
ಪುರಸಭೆ ಅಧ್ಯಕ್ಷ ಜೈವರ್ಧನ್, ಸದಸ್ಯ ಸುರೇಶ್,ಡಿ.ಕೆ.ತಿಮ್ಮಪ್ಪ,
ಜಿ.ಪಂ.ಮಾಜಿ ಸದಸ್ಯ ಎಚ್.ಎಸ್.ಶ್ರೀನಿವಾಸ್,ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಮೀನಾಕುಮಾರಿ,
ಪುರಸಭೆ ಸದಸ್ಯರಾದ ತಿಮ್ಮಪ್ಪ,ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಎಂಜಿನಿಯರಿಂಗ್ ರಂಗನಾಥ್,ಮುಳ್ಳುಸೋಗೆ ಗ್ರಾ.ಪಂ.ಅಧ್ಯಕ್ಷ ಚಲುವರಾಜು, ಸದಸ್ಯ ಶಿವಾನಂದ್ ,ಮಣಿಕಂಠ, ವೇದಾವತಿಬ,ತೊರೆನೂರು ಗ್ರಾ.ಪಂ.ಅಧ್ಯಕ್ಷೆ ರೂಪಮಹೇಶ್,ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಕೆ.ಕೆ.ಧರ್ಮಪ್ಪ, ಮತ್ತಿತರರು ಇದ್ದರು.
Back to top button
error: Content is protected !!