ಕುಶಾಲನಗರ, ಜ 31: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಮತ್ತು ಫಲಾನುಭವಿಗಳಿಗೆ ಆಡುಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಕೊಡಗು ಜಿಲ್ಲಾ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 10 ಮಂದಿ ಫಲಾನುಭವಿಗಳಿಗೆ ತಲಾ 4 ಆಡುಗಳನ್ನು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಫಲಾನುಭವಿಗಳಿಗೆ ವಿತರಿಸಿದರು.
ನಂತರ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಮಡಿಕೇರಿ ಕ್ಷೇತ್ರದಲ್ಲಿ 1000 ಕ್ಕೂ ಅಧಿಕ ಅರಣ್ಯ ಹಕ್ಕು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ಕೂಡ ಅರ್ಜಿ ಸಮಿತಿಯ ಮೂಲಕ ಹಾರಂಗಿ ಪುನರ್ವಸತಿ ಯೋಜನೆಯಡಿ ಫಲಾನುಭವಿಗಳಿಗೆ ದಾಖಲೆಗಳನ್ನು ಒದಗಿಸಲಾಗಿತ್ತು. ಇದು ಈ ಹಿಂದೆ ಸಚಿವರಾಗಿದ್ದವರಾಗಲಿ, ಜಿಲ್ಲೆಯಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿಗಳಿಂದಲೂ ಸಾಧ್ಯವಾಗಿರಲಿಲ್ಲ ಎಂದರು. ಜಾತಿ, ಧರ್ಮ, ಪಕ್ಷ ಮೀರಿ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದೆಯೂ ಕೂಡ ಈ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಗ್ರಾಮದ ಜನರು ಹಣಕ್ಕಿಂತ ಮಿಗಿಲಾಗಿ ಅಭಿವೃದ್ಧಿ ಪರವಾಗಿದ್ದಾರೆ. ಶಾಸಕರ ನೇತೃತ್ವದಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಇಲ್ಲಿ ಸಾಕಾರಗೊಂಡಿವೆ. ಆದರೆ ಸಂಸದರ ಕಡೆಯಿಂದಲೂ ಅಗತ್ಯ ಯೋಜನೆಗಳು, ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಬೇಡಿಕೆಯಿತ್ತರು.
ಗ್ರಾಪಂ ಸದಸ್ಯ, ಅರಣ್ಯ ಹಕ್ಕು ಸಮಿತಿ ಮಾರ್ಗದರ್ಶಕ ಆರ್.ಕೆ.ಚಂದ್ರ ಮಾತನಾಡಿ, ಅರಣ್ಯ ಹಕ್ಕು ಸಮಿತಿ ಮೂಲಕ ಅಗತ್ಯ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಶಾಸಕರ ಕಾಳಜಿಯಿಂದ ಈ ಕಾರ್ಯ ಅತಿ ಶೀಘ್ರವಾಗಿ ಪೂರ್ಣಗೊಂಡು ಸಧ್ಯದಲ್ಲಿಯೇ ಫಲಾನುಭವಿಗಳಿಗೆ ಹಕ್ಕು ಪತ್ರ ಲಭಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಕುಸುಮ, ಗಿರಿಜಾ, ಪಿಡಿಒ ಕಲ್ಪ, ವಲಯ ಅರಣ್ಯಾಧಿಕಾರಿ ಶಿವರಾಂ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್,
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಬಾಲಕೃಷ್ಣ, ಚಂದ್ರಪ್ಪ, ಪಶುಪಾಲನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಬಾದಾಮಿ, ತಾಪಂ ಮಾಜಿ ಸದಸ್ಯ ವಿಜು ಚಂಗಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರೇಮಾನಂದ, ಮಾಜಿ ಸದಸ್ಯರಾದ ಟಿ.ಕೆ.ಸುಮೇಶ್, ಚಿತ್ರಾ, ವಿಜು, ಡಿ.ಆರ್.ಎಫ್.ಒ.ಸುಬ್ರಾಯ,
ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ರಾಮು , ಸಹಕಾರ ಸಂಘದ ಅಧ್ಯಕ್ಷ ಮುರಳಿ ಮಾದಯ್ಯ, ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು, ಫಲಾನುಭವಿಗಳು ಇದ್ದರು.
Back to top button
error: Content is protected !!