ಕುಶಾಲನಗರ, ಜ 21.
ಕುಶಾಲನಗರದ ಸಹಾರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-2 ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಬೊಳ್ಳೂರು ಐಶ್ವರ್ಯ ಪಿಯು ಕಾಲೇಜಿನ ಸ್ಥಾಪಕ ಪುಲಿಯಂಡ ರಾಮ್ ದೇವಯ್ಯ ಚಾಲನೆ ನೀಡಿದರು.
ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮೈದಾನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕುಶಾಲನಗರಕ್ಕೆ ಅತ್ಯಂತ ಅಗತ್ಯವಿದ್ದ ಸುಸಜ್ಜಿತ ಮೈದಾನ ಕೊರತೆ ನೀಗಿಸುವ ನಿಟ್ಟಿನಲ್ಲಿ ಪುರಸಭೆ ಕಾರ್ಯೋನ್ಮುಖವಾಗಿದೆ. ಗುಂಡುರಾವ್ ಬಡಾವಣೆಯ ಐಡಿಎಸ್ಎಂಟಿಗೆ ಸೇರಿದ 6 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮೈದಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಶಾಸಕ ಅಪ್ಪಚ್ಚುರಂಜನ್ ಅವರ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದರು.
ಕುಡಾ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಕುಶಾಲನಗರ ಪುರಸಭೆ ಮೂಲಕ ನಿರ್ಮಾಣಗೊಂಡಿರುವ ಸುಂದರ ಮೈದಾನದಲ್ಲಿ ಪ್ರಥಮವಾಗಿ ಸಹಾರ ಕ್ಲಬ್ ಆಶ್ರಯದಲ್ಲಿ ಪಂದ್ಯಾಟ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಕ್ರೀಡಾಪಟುಗಳ ನೆಚ್ಚಿನ ಕ್ರೀಡಾಂಗಣವಾಗಿ ರೂಪುಗೊಳ್ಳಲಿದೆ ಎಂದರು.
ಈ ಸಂದರ್ಭ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಎಂ.ಬಿ.ಸುರೇಶ್, ಬಿ.ಎಲ್.ಜಗದೀಶ್, ಲೋಕೋಪಯೋಗಿ ಇಲಾಖೆ ಅಭಿಯಂತರ ಸೈಜನ್ ಪೀಟರ್,
ಕ್ಲಬ್ ಅಧ್ಯಕ್ಷ ಎಚ್.ಕೆ.ಸುಮೇರ್, ಕಾರ್ಯದರ್ಶಿ ಚಂದು ಇದ್ದರು.
ಶನಿವಾರ ಪತ್ರಕರ್ತರು, ರಾಜಕಾರಣಿಗಳು, ಆಯೋಜಕರು, ತಂಡಗಳ ನಾಯಕರ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಿತು.
ಮೂರು ದಿನಗಳ ಕಾಲ ಪಂದ್ಯಾಟ ನಡೆಯಲಿದೆ.
Back to top button
error: Content is protected !!