ಕುಶಾಲನಗರ, ಜ 14: ಕೂಡ್ಲೂರು ಕೈಗಾರಿಕಾ ಪ್ರದೇಶ ಸುಂದರನಗರ ಗ್ರಾಮದ ಸರ್ವೆ ನಂ. 5/1 ರಲ್ಲಿ 1 ಎಕರೆ 20 ಸೆಂಟ್ ಜಾಗ ಸರ್ಕಾರಿ ಪೈಸಾರಿ ಜಾಗವನ್ನು ಸುಮಾರು 30-40 ವರ್ಷಗಳಿಂದಲೂ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು ಮತ್ತು ಇದರ ಪಕ್ಕದ ಜಾಗದಲ್ಲಿ ತುಂಬಾ ಪ್ರಾಚೀನ ಕಾಲದ ಜವರಪ್ಪನಾಯಕನ ಕೆರೆ ಇದ್ದು ಈ ಕೆರೆಯಿಂದ ಆನೆಕರೆ ನೀರು ತುಂಬುತ್ತಿದ್ದು, ಈ ಕೆರೆಯ ನೀರನ್ನೇ ಅವಲಂಬಿಸಿರುವ ಕಾಡು ಪಾಣಿಗಳು ಮತ್ತು ಜಾನುವಾರುಗಳು ಕುಡಿಯುವ ನೀರಿಗೋಸ್ಕರ ಈ ಕೆರೆಯನ್ನೇ ತುಂಬ ಕಾಲದಿಂದ ಪ್ರಸ್ತುತ ಅವಧಿವರೆಗೆ ಅವಲಂಭಿಸಿರುತ್ತವೆ. ಈ ಹಿಂದೆ ಸರ್ಕಾರದ ಅನುದಾನದಿಂದ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕೆರೆಯ ಹೂಳೆತ್ತುವ ಕಾಮಗಾರಿ ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಮಶಾನವನ್ನು ನಿರ್ಮಾಣ ಮಾಡಲಾಗಿದೆ ಮತ್ತು ಸ್ಮಶಾನದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿರುತ್ತದೆ. ಮತ್ತು ಕೋವಿಡ್-19 ಸಮಯದಲ್ಲಿ ಮೃತರಾದ ಹಲವು ಜನರನ್ನು ಇಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿರುತ್ತದೆ.ಹಾಗೂ ಈ ಹಿಂದೆ ಈ ಗ್ರಾಮದ ನಿವಾಸಿಗಳು ವಾಸ ಇದ್ದಂತಹ ಜಾಗವನ್ನು ಕೈಗಾರಿಕಾ ಅಭಿವೃದ್ಧಿ ನಿಗಮವು ಸ್ಥಳೀಯ ಗಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ವಶಪಡಿಸಿಕೊಂಡಿದ್ದು ಮತ್ತು ಈ ಜಾಗವನ್ನು ಉದ್ದಿಮೆ ನಡೆಸಲು ಬೇರೆಯ ವ್ಯಕ್ತಿಗೆ ನಿಗಮದಿಂದ ಮಾರಾಟ ಸಹ ಮಾಡಿರುತ್ತಾರೆ. ಮತ್ತು ಆ ನಿವೇಶನ ಮಂಜೂರಾತಿಯಾದರು ಸ್ಮಶಾನ ಜಾಗಕ್ಕೆ ಬೇಲಿ ನಿರ್ಮಾಣ ಮಾಡಿದ್ದು ಇಲ್ಲಿಯ ನಿರಾಶ್ರಿತರಿಗೆ ಮತ್ತು ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಬೇರೆ ಸ್ಮಶಾನ ಸೌಕರ್ಯ ಇರುವುದಿಲ್ಲ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಯವರು ಕೈಗಾರಿಕಾಭಿವೃದ್ಧಿ ಏಕಗವಾಕ್ಷಿ ಸಭೆಯಲ್ಲಿ ಚರ್ಚಿಸಿ ಸದರಿ “ಕೈಗಾರಿಕಾ ನಿವೇಶನಗಳನ್ನು ಬದಲಾಯಿಸಿ ಅವರಿಗೆ ಕೈಗಾರಿಕಾ ಬಡಾವಣೆಯ ಸಿಎ ನಿವೇಶನ ಮಂಜೂರು ಮಾಡಿ ಹಿಂದೆ ಸ್ಮಶಾನ ಇದ್ದ ಜಾಗವನ್ನು ಬಫರ್ ಜೋನ್ ಎಂದು ಬದಲಾವಣೆ ಮಾಡಿರುತ್ತಾರೆ. ಹಾಗಾಗಿ ತಾವುಗಳು ಇದನ್ನು ಪರಿಶೀಲಿಸಿ ಈ ಜಾಗವನ್ನು ಸುಂದರನಗರ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಸ್ಮಶಾನವಾಗಿ ಉಪಯೋಗಿಸಲು ಅವಕಾಶ ಮಾಡಿಕೊಡಬೇಕಾಗಿ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
Back to top button
error: Content is protected !!