ಕುಶಾಲನಗರ, ಜ 04: ಎಸ್.ಎನ್.ಡಿ.ಪಿ. ಯೋಗಂ ನ ಕುಶಾಲನಗರ ಶಾಖೆಯ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಅಧ್ಯಕ್ಷ ಕೆ.ಟಿ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿಯಲ್ಲಿ ನಡೆಯಿತು.
ಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಜೊತೆಗೆ ಮಹಾಸಭೆ
ಉದ್ಘಾಟನೆ ಮಾಡಲಾಯಿತು.
ಶಾಖೆಯ ಕಾರ್ಯದರ್ಶಿ ಕೆ.ಆರ್. ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 3 ವರ್ಷಗಳ ಆದಾಯ ಹಾಗೂ ಖರ್ಚು ವೆಚ್ಚಗಳ ಲೆಕ್ಕ ಮಂಡನೆಯನ್ನು ಮಾಡಿದರು. ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ನ ಕಾರ್ಯದರ್ಶಿ ಪ್ರೇಮಾನಂದ್ ಅವರ ನೇತೃತ್ವದಲ್ಲಿ ಹಳೆಯ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸ ಆಡಳಿತ ಮಂಡಳಿಯ ರಚನೆ ಮಾಡಲಾಯಿತು.
ಶಾಖೆಯ ಅಧ್ಯಕ್ಷರಾಗಿ ಕೆ.ಟಿ.ಗಣೇಶ್, ಉಪಾಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಕಾರ್ಯದರ್ಶಿಯಾಗಿ ಕೆ.ಆರ್.ರಾಜೇಶ್, ಯೋಗಂ ಪ್ರತಿನಿಧಿಯಾಗಿ ಟಿ.ವಿ.ಕಿಶೋರ್, ಯೂನಿಯನ್ ಪ್ರತಿನಿಧಿಯಾಗಿ ಟಿ.ಎಸ್.ಉದಯಕುಮಾರ್,
ಪಂಚಾಯಿತಿ ಸದಸ್ಯರುಗಳಾಗಿ ರಾಬಿನ್ ಪಿ. ರಾಜೇಂದ್ರನ್, ಸಿ.ಕೆ.ಸುಕೇಶ್,ಮಣಿ ಹರೀಂದ್ರನ್ , ಹಾಗೂ ನಿರ್ದೇಶಕರುಗಳಾಗಿ ಕೆ.ಎಂ. ಅನೀಶ್ ಕುಮಾರ್, ಕೆ.ಕೆ.ವಿನು, ಕೆ.ಜಯರಾಮ್,ವಿ.ಕೆ.ದಾಸ್, ವಿ.ಕೆ.ದಿವಾಕರ ,ಸಿ.ಎನ್.ಕರ್ಣನ್, ಟಿ.ಎಸ್.ಪ್ರಸಾದ್, ಇವರುಗಳನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯ ಮುಖ್ಯ ಅತಿಥಿಗಳಾಗಿ ಎಸ್.ಎನ್.ಡಿ.ಪಿ.ಕೊಡಗು ಯೂನಿಯನ್ ನ ನಿರ್ದೇಶಕರುಗಳಾದ ಗಿರೀಶ್, ಆನಂದ್, ಯೋಗಂ ಪ್ರತಿನಿಧಿ ಟಿ.ವಿ.ಕಿಶೋರ್, ಯೂನಿಯನ್ ಪ್ರತಿನಿಧಿ ಟಿ.ಎಸ್.ಉದಯಕುಮಾರ್ ಪ್ರಮುಖರಾದ ಶ್ರೀಜಾ ರಾಜೇಶ್, ಮಣಿ ಹರೀಂದ್ರ ಇದ್ದರು.
Back to top button
error: Content is protected !!