ಕಾರ್ಯಕ್ರಮ

ಕುಶಾಲನಗರ ತಾ.ಸಾಹಿತ್ಯ ಸಮ್ಮೇಳನಕ್ಕೆ ಕೈಜೋಡಿಸಲು ಮನವಿ: ಪೂರ್ವಭಾವಿ ಸಭೆ

ಕುಶಾಲನಗರ, ಡಿ‌ 18 : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ ತಿಂಗಳಲ್ಲಿ ಆಯೋಜಿಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದರು.

ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ಸಂಘ ಸಂಸ್ಥೆಗಳ ಪ್ರಮುಖರ ಹಾಗು ಊರಿನ ಹಿರಿಯರ ಉಪಸ್ಥಿತಿಯಲ್ಲಿ ನಡೆದ ಸಮ್ಮೇಳನದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರ ಶ್ರಮ ಇಲ್ಲಿ ಮುಖ್ಯ. ತಾಲ್ಲೂಕಿನ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸಮ್ಮೇಳನ ಊರಿನ ಉತ್ಸವ ವಾಗಬೇಕಿದೆ.‌ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕಾಮತ್ ಭಿನ್ನವಿಸಿದರು. ಕಸಾಪ ಜಿಲ್ಲಾ

ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಯುವಜನರನ್ನು ಸಾಹಿತ್ಯದೆಡೆಗೆ ಆಕರ್ಷಿಸುವ ಹಬ್ಬವಾಗಬೇಕಿದೆ.‌ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಗೌರವಿಸುವ ವೇದಿಕೆ ಇದಾಗಿದೆ. ಆ ನಿಟ್ಟಿನಲ್ಲಿ ತಾಲ್ಲೂಕಿನ ಪ್ರತಿಯೊಬ್ಬರು ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಬೇಕೆಂದರು.

ಕಸಾಪ ವಿಶೇಷ ಆಹ್ವಾನಿತರಾದ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ತಾಲ್ಲೂಕಾಗಿ ಘೋಷಣೆಯಾದಾಗ ಮನ‌ತುಂಬಿ ಬಂದಿತ್ತು.‌ ಇದೀಗ ಈ ಹೊಸ ತಾಲ್ಲೂಕಿನಲ್ಲಿ ಜರುಗುತ್ತಿರುವ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಅತ್ಯಂತ ಯಶಸ್ವಿಯಾಗಿ ಸಂಘಟಿಸಬೇಕಿದೆ ಎಂದರು ಮತ್ತೋರ್ವ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಪುರಸಭಾ ಅಧ್ಯಕ್ಷ ಜಯವರ್ಧನ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿದರು. ಪುರಸಭಾ ಉಪಾಧ್ಯಕ್ಷೆ ಸುರಯ್ಯಾ ಭಾನು, ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಎಂ.ಟಿ.ಬೇಬಿ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಎಂ.ಇ.ಮೊಹಿದ್ದೀನ್, ಫ್ಯಾನ್ಸಿ ಮುತ್ತಣ್ಣ, ಟಿ.ಜಿ.ಪ್ರೇಮಕುಮಾರ್ ಇದ್ದರು.

ಇದೇ ಸಂದರ್ಭ ಸಮ್ಮೇಳನದ ರೂಪು ರೇಷೆಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ, ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಸ್ವಾಗತ ಸಮಿತಿ, ಹಣಕಾಸು ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ಇದೇ ಸಂದರ್ಭ ರಚಿಸಲಾಯಿತು.

ಸಮ್ಮೇಳನದ ದಿವಸ ಆತಿಥ್ಯಕ್ಕೆ ಸಾಹಿತ್ಯ ಪರಿಷತ್ತಿಗೆ ಅಗತ್ಯವಿದ್ದಲ್ಲಿ ಹತ್ತು ಕೊಠಡಿಗಳನ್ನು ಉದಾರವಾಗಿ ನೀಡುವುದಾಗಿ ಉದ್ಯಮಿಗಳೂ ಆದ ಕಸಾಪ ಸದಸ್ಯ ರವೀಂದ್ರ ರೈ ಸಭೆಯಲ್ಲಿ ಘೋಷಿಸಿದರು.

ಕುಶಾಲನಗರ ಪುರಸಭೆ ಸದಸ್ಯರಾದ ರೂಪ ಉಮಾಶಂಕರ್, ವಿ.ಎಸ್.ಆನಂದಕುಮಾರ್, ಎಂ.ವಿ.ನಾರಾಯಣ, ಕೆ.ಜಿ.ಮನು, ನಿವೃತ್ತ ಪ್ರಾಂಶುಪಾಲ ಹೆಚ್.ಬಿ.ಲಿಂಗಮೂರ್ತಿ, ಸಬಲಂ ಭೋಜಣ್ಣ ರೆಡ್ಡಿ, ಉಪನ್ಯಾಸಕ ಫಿಲಿಪ್ ವಾಸ್, ಉ.ರಾ.ನಾಗೇಶ್, ಹೇಮಲತಾ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ವೆಂಕಟೇಶ್ ಪೂಜಾರಿ, ಎಂ.ಕೃಷ್ಣ, ರಾಮದಾಸ್, ಮೊಣ್ಣಪ್ಪ, ರವೀಂದ್ರ ರೈ, ನಾಗೇಗೌಡ, ಲೇಖನಾ, ಚಂದ್ರು, ಡಿ.ವಿ.ರಾಜೇಶ್, ಉಮಾಶಂಕರ್, ಕೆ.ಬಿ.ರಾಜು, ಎಸ್.ಎನ್.ರಾಜೇಂದ್ರ, ಜಗದೀಶ್, ಎಂ.ಎನ್.ಚಂದ್ರಮೋಹನ್, ಕೊಡವ ಸಮಾಜದ ಅಧ್ಯಕ್ಷ ಮೊಣ್ಣಪ್ಪ, ಬಿ.ಸಿ.ಶಂಕರಯ್ಯ, ಹೆಚ್.ಡಿ.ಚಂದ್ರು ಮತ್ತಿರರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!