ಕುಶಾಲನಗರ, ಡಿ 18: ಕುಶಾಲನಗರ ಪುರಸಭೆ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಕಳೆಪೆಯಾಗಿದೆಯ. ಹೌದು ಎನ್ನುವಂತಿದೆ ಇಲ್ಲಿನ ದೃಶ್ಯ. ಕೆಳ ಅಂತಸ್ಥಿನ ಆರ್ ಸಿಸಿ ಎರಡು ದಿನಗಳ ಹಿಂದೆ ಮಾಡಲಾಗಿದ್ದು ಜಲ್ಲಿ ಎದ್ದು ಕಾಣುತ್ತಿದೆ. ತಾಂತ್ರಿಕ ಪರಿಣಿತರ ಪ್ರಕಾರ ಸಿಮೆಂಟ್ ಕೊರತೆಯಿಂದ ಈ ಮಾದರಿ ಕಂಡುಬರುತ್ತದೆ. ಸರಿಯಾದ ಪ್ರಮಾಣದಲ್ಲಿ ಸಿಮೆಂಟ್ ಮಿಕ್ಸಿಂಗ್ ಕೊರತೆ ಕಾರಣ ಕಾಮಗಾರಿ ಕಳಪೆಯಾಗಿದೆ. ಇದೀಗ ಜಲ್ಲಿ ಹೊರ ಕಾಣುತ್ತಿರುವ ಸ್ಥಳಗಳಲ್ಲಿ ಸಿಮೆಂಟ್ ತೇಪೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿರುವುದು ಕಂಡುಬಂದಿದೆ.
ಸಿಮೆಂಟ್ ಸಮಪ್ರಮಾಣದಲ್ಲಿ ಇರದಿದ್ದ ಪಕ್ಷದಲ್ಲಿ ಕಟ್ಟಡ ಬಹುಬೇಗ ದೃಢತೆ ಕಳೆದುಕೊಳ್ಳಲಿದೆ ಎಂಬುದು ಆರೋಪ.
Back to top button
error: Content is protected !!