ಕುಶಾಲನಗರ, ಡಿ 18 : ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ತಾಲ್ಲೂಕು ಕೇಂದ್ರದಲ್ಲಿರುವ ಸಾಂಸ್ಕ್ರತಿಕ ಭವನವನ್ನು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪರಿಶೀಲಿಸಿದರು.
ಇದೇ ಸಂದರ್ಭ ಅಧ್ಯಕ್ಷರಿಗೆ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮನವಿ ಪತ್ರ ಸಲ್ಲಿಸಿ ಗಡಿ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸುವಂತೆ ನೀಡಿದ ಮನವಿ ಪತ್ರ ಸ್ವೀಕರಿಸಿದ ಅಧ್ಯಕ್ಷರು, ಈ ಬಗ್ಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಆಯುಕ್ತರಿಗೆ ಸೂಕ್ತ ಅನುದಾನ ಬಿಡುಗಡೆಗೆ ಪತ್ರ ಬರೆಯಲಾಗುವುದು. ಹಾಗೆಯೇ ಗಡಿ ಪ್ರಾಧಿಕಾರದ ವತಿಯಿಂದಲೂ ಪರಿಶೀಲನೆ ನಡೆಸಿ ಅನುದಾನ ಒದಗಿಸುವುದಾಗಿ ಡಾ.ಸೋಮಶೇಖರ್ ಹೇಳಿದರು.
ಈ ಸಂದರ್ಭ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಇದ್ದರು.
Back to top button
error: Content is protected !!