ಧಾರ್ಮಿಕ
ಕುಶಾಲನಗರದ ಶ್ರೀ ಅಂಜನೇಯ ದೇವಾಲಯದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿದ ಹನುಮ ಜಯಂತಿ
ಕುಶಾಲನಗರ, ಡಿ 05:
ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಶ್ರದ್ದಾಭಕ್ತಿಯಿಂದ ಸೋಮವಾರ ನಡೆಯಿತು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 37ನೇ ವರ್ಷದ ಅದ್ದೂರಿ ಹನುಮ ಜಯಂತೋತ್ಸವ ಅಂಗವಾಗಿ ದೇವಾಲಯದಲ್ಲಿ
ಸೋಮವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಪಾನಕ, ವಿತರಣೆ ಸೇರಿದಂತೆ
ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ರಾಧಾಕೃಷ್ಣ ಮತ್ತು ಮಯೂರ್ ಭಟ್ ಪೂಜಾ ವಿಧಿ ನೆರವೇರಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ವಿ.ಹೆಚ್, ಕಾರ್ಯದರ್ಶಿ ನವನೀತ್ ಪಿ.ಪಿ, ಉಪಾಧ್ಯಕ್ಷ ಅನುದೀಪ್ ಕೆ.ವಿ.
ಸಹ ಸಂಚಾಲಕ ಹರೀಶ್ ಎಲ್, ಸಹ ಕಾರ್ಯದರ್ಶಿ ವಿನು ಟಿ., ಖಜಾಂಚಿ ಪ್ರವೀಣ್ ಎಸ್., ಸಲಹೆಗಾರ ರಾಜೀವ, ಸಂಚಾಲಕ ಚಂದ್ರಶೇಖರ್ ಕೆ.ಎಸ್., ನಿರ್ದೇಶಕರಾದ ಪ್ರಸಾದ್ ವಿ.ಎನ್., ಪರಮೇಶ್ ಡಿ.ಆರ್.ರಘು ಡಿ.ವಿ ಸೇರಿದಂತೆ ಹನುಮಂತೋತ್ಸವ ದಶ ಮಂಟಪಗಳ ಸಮಿತಿ ಪ್ರಮುಖರು, ಇತರೆ ಪದಾಧಿಕಾರಿಗಳು ಇದ್ದರು.