ಕುಶಾಲನಗರ, ನ 30: ಕೆ.ಆರ್.ಎಸ್ (ಕೃಷ್ಣರಾಜ ಸಾಗರ ಅಣೆಕಟ್ಟೆ) ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಆನಂದೂರು ಗ್ರಾಮದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಸೇರಿ ಸ್ವಚ್ಚತಾ ಕಾರ್ಯ ನಡೆಸಿದರು. ಈ ಸಂದರ್ಭ ಬಹುತೇಕ ಹೆಚ್ಚಿನ ಕಸ ಮಧ್ಯದ ಗಾಜಿನ ಬಾಟಲಿಗಳು, ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಊಟದ ತಟ್ಟೆಗಳು… ರಾಶಿ ರಾಶಿ ಕರಗದ ಕಸದ ರಾಶಿ ಕಂಡುಬಂತು.
ಇದು ಕೇವಲ ಹಿನ್ನೀರಿನ ದಂಡೆಯಲ್ಲಿ ಸಿಕ್ಕಿರುವ ಕಸದ ರಾಶಿ. ನೀರಿನೊಳಗೆ ಅದೆಷ್ಟಿದೆಯೊ? ಮಳೆಗಾಲದ ದೊಡ್ಡ ನೀರರಾಶಿಯೊಂದಿಗೆ ಕೊಚ್ಚಿಕೊಂಡು ಅಣೆಕಟ್ಟೆಯ ಒಡಲಲ್ಲಿ ಅದೆಷ್ಟು ರಾಶಿ ಇಂತಹ ಕರಗದ ಕಸ ರಾಶಿಗೊಂಡಿದೆಯೋ?
ಕಾವೇರಮ್ಮ, ಹೇಮಾವತಿ ತಾಯಿ ಎಂದು ನದಿಗಳನ್ನು ಪೂಜಿಸುವ ನಮ್ಮ ಸಮಾಜ ಆ ನದಿಗಳಲ್ಲಿ ಈ ರೀತಿ ಕಸ ಹಾಕಿ ಅದನ್ನು ಹಾಳುಮಾಡುತ್ತಿದೆ. ದಿನಬಳಕೆಗೆ ಕುಡಿಯುವ ನೀರಿಗೆ ಬಹುತೇಕ ಕೆ ಆರ್ ಎಸ್ ಅಣೆಕಟ್ಟೆಯ ನೀರನ್ನೆ ಅವಲಂಬಿಸಿರುವ ಬೆಂಗಳೂರು, ಮೈಸೂರು, ಮಂಡ್ಯ ನಗರಗಳ ಜನ, ಅಣೆಕಟ್ಟೆಯ ನೀರಿನಿಂದಲೇ ನೀರಾವರಿ ಸೌಲಭ್ಯ ಪಡೆದು ಭತ್ತ ಕಬ್ಬು ಬೆಳೆಯುವ ಬಹುತೇಕ ಇಡೀ ಮಂಡ್ಯ ಜಿಲ್ಲೆಯ ರೈತ ಸಮುದಾಯ ಕೆ.ಆರ್.ಎಸ್ ಅಣೆಕಟ್ಟೆ, ಅದಕ್ಕೆ ನೀನ್ನೊದಗಿಸುವ ಕಾವೇರಿ, ಹೇಮಾವತಿ, ಹಾರಂಗಿಯಂತಹ ನದಿಗಳ ಸಂರಕ್ಷಣೆಗೆ, ಸ್ವಚ್ಚತೆ, ಸುರಕ್ಷತೆಗೆ ಮಹತ್ವ ನೀಡದೆ ಹೋದರೆ ಹೇಗೆ?
Back to top button
error: Content is protected !!