ಕುಶಾಲನಗರ, ನ 30: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರಿನಲ್ಲಿ ಗೋಸದನ ಜಾಗವನ್ನು ಮರಳಿ ಪಶುಸಂಗೋಪನಾ ಇಲಾಖೆ ವರ್ಗಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಾಮಾಜಿಕ ಅರಣ್ಯ ಹೆಸರಿನಲ್ಲಿ ಎರಡು ಎಕರೆ ಗೋಸದನ ಜಾಗ ಅರಣ್ಯ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ. ಈ ಭಾಗದ ರೈತರ ಅನುಕೂಲಕ್ಕೆ ಈ ಜಾಗವನ್ನು ಈಗಿರುವ ಸ್ಥಿತಿಯಲ್ಲಿ ಉಳಿಸಿ ಮುಂದುವರೆಸಿಕೊಂಡು ಹೋಗಬೇಕಿದೆ. ಸದರಿ ಸ್ಥಳದಲ್ಲಿ ಆಟದ ಮೈದಾನ, ಪಶು ಚಿಕಿತ್ಸಾ ಕೇಂದ್ರ, ಡೇರಿ, ಗೋಸದನವಿದ್ದು ಇದು ಅರಣ್ಯ ಇಲಾಖೆ ಪಾಲಾಗದಂತೆ ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Back to top button
error: Content is protected !!