ಕುಶಾಲನಗರ, ನ 23:
ಭವಿಷ್ಯದ ಅಂಬಾರಿ ಆನೆ ಎಂದೇ ಪ್ರಖ್ಯಾತವಾಗಿದ್ದ ೩೭ ವರ್ಷ ಪ್ರಾಯದ ಗೋಪಾಲಸ್ವಾಮಿ ಆನೆಯು ಕಾಡಾನೆ ಜೊತೆಗಿನ ಕಾದಾಟಕ್ಕೆ ಸಿಲುಕಿ ತೀವ್ರ ಗಾಯಗೊಂಡು ಮೃತಪಟ್ಟಿದೆ.
ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವಲಯದ ಹನಗೋಡು ಬಳಿಯ ಕೊಳವಿಗೆ ಸಮೀಪದ ಮೂರು ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದೆ.
ಮಂಗಳವಾರದAದು ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ(ಅಯ್ಯಪ್ಪ)ಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಹಾಗೂ ಧೃಡಕಾಯದ ಅಯ್ಯಪ್ಪ ಕಾಡಾನೆ ನಡುವೆ ಕಾಡಿನಲ್ಲಿ ಕಾದಾಟ ನಡೆದಿದೆ. ಅಯ್ಯಪ್ಪನ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ, ಅಲ್ಲದೆ ದಂತದಿAದ ಎಲ್ಲೆಡೆ ತಿವಿದಿರುವುದರಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಅಸ್ಪಸ್ಥಗೊಂಡಿದೆ.
ಎಂದಿನAತೆ ಗೋಪಾಲಸ್ವಾಮಿ ಆನೆಯ ಮಾವುತ ಮಂಜು, ಕವಾಡಿ ಮಂಜರವರು ಆನೆಯನ್ನು ಕರೆತರಲು ಕಾಡಿಗೆ ಹೋದ ವೇಳೆ ಕಾದಾಟವನ್ನು ಕಣ್ಣಾರೆ ಕಂಡು ಆನೆಯನ್ನು ಬೆದರಿಸಲು ಹೋಗುತ್ತಿದ್ದಂತೆ ಅವರ ಮೇಲೆಯೇ ಕಾಡಾನೆ ದಾಳಿ ಮಾಡಲು ಮುಂದಾಗಿದ್ದರಿAದ ತಪ್ಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಆರ್‌ಎಫ್‌ಓ ಗಣರಾಜ್ ಪಟಗಾರ್ ಭೇಟಿ ಇತ್ತು, ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ವೈದ್ಯರ ತಂಡದ ನಿಗಾದಲ್ಲಿದ್ದ ಗೋಪಾಲಸ್ವಾಮಿ ತೀವ್ರ ಅಸ್ಪಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುದವಾರ ಮೃತಪಟ್ಟಿತು.
ಕಾಡಾನೆಗಳ ಹಾವಳಿ ನಿಯಂತ್ರಿಸಲು ಗೋಪಾಲಸ್ವಾಮಿ ಆನೆಯನ್ನು ಕೊಳವಿಗೆ ವಸತಿ ಗೃಹದ ಬಳಿ ನಿಯೋಜಿಸಲಾಗಿತ್ತು.
ಹೆತ್ತೂರಿನಲ್ಲಿ ಸೆರೆ;
ಗೋಪಾಲಸ್ವಾಮಿ ಆನೆಯನ್ನು ೨೦೦೦ರಲ್ಲಿ ಹಾಸನ ಜಿಲ್ಲೆಯ ಹೆತ್ತೂರಿನಲ್ಲಿ ಸರೆ ಹಿಡಿಯಲಾಗಿತ್ತು. ಇದನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ತರಬೇತಿಗೊಳಿಸಲಾಗಿತ್ತು, ಧೃಡಕಾಯದ ಗೋಪಾಲಸ್ವಾಮಿಯು ಹುಲಿ ಹಾಗೂ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅನುಭವವಿತ್ತು. ೨೦೧೨ರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ. ಕಳೆದ ವರ್ಷ ಶ್ರೀರಂಗಪಟ್ಟಣದ ದಸರೆಯಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು. ಎಲ್ಲರ ಆಕರ್ಷಣೆಯ ಧೃಡಕಾಯದ ಗೋಪಾಲಸ್ವಾಮಿಯ ಸಾವು ಮಾವುತ, ಕವಾಡಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.
ಹೂಳಲಾಗುವುದು:
ಈಗಾಗಲೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವನ್ನಪ್ಪಿದ ಸ್ಥಳದಲ್ಲೇ ಹೂಳಲಾಗುವುದು, ಗೋಪಾಲಸ್ವಾಮಿಯ ಸಾವು ಅರಣ್ಯ ಇಲಾಖೆಗೆ ಸಾಕಷ್ಟು ನೋವು, ಬೇಸರ ತಂದಿದೆ ಎನ್ನುತ್ತಾರೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ.
Back to top button
error: Content is protected !!