ಕುಶಾಲನಗರ, ನ 10: ಟಿಪ್ಪು ಜಯಂತಿ ಆಚರಣೆ ವೇಳೆ ಹಿರಿಯ ಹಿಂದು ಸಂಘಟನೆಯ ಮುಖಂಡನ ಕುಟ್ಟಪ್ಪ ಸಾವು ದಿನವನ್ನು ಕೊಡಗಿನಲ್ಲಿ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದ್ದು. ಈ ದಿನ ಹಿಂದು ಜಾಗರಣ ವೇದಿಕೆಯು ಜಿಲ್ಲೆಯಾದ್ಯಂತ ಕುಟ್ಟಪ್ಪ ಬಲಿದಾನ್ ದಿವಸ್ – ಪುಣ್ಯ ಸ್ಮರಣೆ ಕಾರ್ಯಕ್ರಮದ ಮೂಲಕ ಮತಾಂಧ ದುಷ್ಕರ್ಮಿಗಳಿಂದ ಹತ್ಯೆಯಾಗಿ ಹುತಾತ್ಮರಾದ ಕುಟ್ಟಪ್ಪ ಸ್ಮರಣೆ ಮಾಡುತ್ತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ಹಿಂದು ಜಾಗರಣ ವೇದಿಕೆಯ ಎಲ್ಲ ವಲಯ/ಘಟಕಗಳಲ್ಲೂ ಕುಟ್ಟಪ್ಪಾಜಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಹುಟ್ಟೂರಾದ ಸೋಮವಾರಪೇಟೆಯ ಮಾದಾಪುರದಲ್ಲಿ ಕುಟುಂಬಸ್ಥರು ಸಮಾದಿಗೆ ಶ್ರದ್ದಾಂಜಲಿ ಪೂಜೆ ಬಳಿಕ ಸಹಸ್ರ ಗ್ರಾಮದ ಹಿಂದು ಯುವಕರು ಒಟ್ಟುಗೂಡಿ ಕುಟ್ಟಪ್ಪರವರಿಗೆ ಶ್ರದ್ದಾಂಜಲಿ ಅರ್ಪಿಸಿದರು.
Back to top button
error: Content is protected !!