ಕುಶಾಲನಗರ, ನ 10: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಸಾಂಸ್ಕೃತಿಕ ಕೂಟವು ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಕೂಟದ ಅಧ್ಯಕ್ಷರಾದ ವಾಂಚಿರ ಮನು ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮನುನಂಜುಂಡ, ಕೊಡಗಿನಲ್ಲಿರುವವರು ತಮ್ಮ ಜಮ್ಮಾ ಅಸ್ತಿಯನ್ನು ಮಾರಾಟ ಮಾಡಿದೆ ಕೊಡಗನ್ನು ಕೊಡಗಾಗಿ ಉಳಿಸಬೇಕು ಎಂದರು.
ಈ ಸಂದರ್ಭ ಮೈಸೂರು ವಿಶ್ವವಿದ್ಯಾನಿಲಯದ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಕೂಟದ ಸದಸ್ಯರಾದ ಪಟ್ಟಡ ವೇಣು ಎಂಬವರ ಪುತ್ರಿ ನಯನಿಕಾ ಎಂಬುವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೂಟದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಕೂಟದ ಕಾರ್ಯದರ್ಶಿ
ಸತೀಶ್, ಖಜಾಂಚಿ ಪೊನ್ನಪ್ಪ, ನಿರ್ದೇಶಕರುಗಳಾದ ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ , ಪಟ್ಟಡ ಚಿಟ್ಟಿಯಪ್ಪ, ಮುಕ್ಕಟ್ಟಿರ ಅಪ್ಪಣ್ಣ, ಮುಕ್ಕಟ್ಟಿರ ದಿವ್ಯ ಉದಿಯಂಡ ರತ್ತು, ಸದಸ್ಯರು ಹಾಜರಿದ್ದರು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Back to top button
error: Content is protected !!