ಆರೋಪ
ಹಿಂದೂ ಧರ್ಮಕ್ಕೆ ಕಾಂಗ್ರೆಸ್ಸಿಗರಿಂದ ಕಪ್ಪುಚುಕ್ಕೆ ತರುವ ಯತ್ನ: ನವನೀತ್ ಪೊನ್ನೇಟಿ ಆರೋಪ

ಕುಶಾಲನಗರ, ನ 09:ಹಿಂದು ಧರ್ಮಕ್ಕೆ ಹಾಗೂ ಹಿಂದೂ ಎಂಬ ಪದಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿದ್ದು ಅದಕ್ಕೆ ಕಪ್ಪು ಚುಕ್ಕೆ ತರುವಂತ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನವನೀತ್ ಪೊನ್ನೇಟಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಇದು ಪರ್ಷಿಯನ್ ನಿಂದ ಬಂದಿರುವ ಪದ ಇದು ನಮ್ಮ ಪದವೇ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಇದು ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ ಮತ್ತು ಇದು ಹಿಂದೂಗಳ ಕುರಿತು ಕಾಂಗ್ರೆಸಿಗರ ಮನಸ್ಥಿತಿ. ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ.ಹಿಂದು, ಹಿಂದುತ್ವ ಹಾಗೂ ಹಿಂದು ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೇ ಬಂದಿದೆ.ಈ ಹಿಂದೆ ಸಿದ್ದರಾಮಯ್ಯ ನನಗೆ ಕೇಸರ ತಿಲಕ ಕಂಡರೆ ಭಯ ಎಂದಿದ್ದರು ಕೇಸರಿ ಪೇಟವನ್ನು ಕೂಡ ಒಂದು ಸಭೆಯಲ್ಲಿ ಕಿತ್ತೆಸೆದಿದ್ದರು.ಸಿದ್ದರಾಮಯ್ಯ ಅವರ ಹಾದಿಯಲ್ಲೇ ಎಂ.ಬಿ.ಪಾಟೀಲ್ ಕೂಡ ಹಿಂದೂ ಧರ್ಮವನ್ನು ಒಡೆಯುವ ಸಂಚು ರೂಪಿಸಿದ್ದರು ಹೀಗೆ ಕಾಂಗ್ರೆಸ್ ನವರಿಗೆ ಒಟ್ಟಿನಲ್ಲಿ ಹಿಂದೂ ಎಂದರೆ ಅಲರ್ಜಿ ಎಂಬಂತಾಗಿದೆ. ಚುನಾವಣೆ ಸಮೀಪಿಸಿದಾಗಲೆಲ್ಲಾ ಕಾಂಗ್ರೆಸ್ಸಿಗರಿಂದ ಬೇರೆ ಧರ್ಮವನ್ನು ಓಲೈಸುವ ಸಲುವಾಗಿ ಅವರು ನಿರಂತರವಾಗಿ ಹಿಂದೂ ಧರ್ಮವನ್ನು ಹಿಯಾಳಿಸುವ ಕೆಲಸ ಮಾಡುತ್ತಿದ್ದು ಇದಕ್ಕೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ತಕ್ಕ ಉತ್ತರ ನೀಡಲಿದ್ದಾರೆ.