ಕುಶಾಲನಗರ, ನ 09: ಕುಶಾಲನಗರ ಬ್ಲಾಕ್ ಕಾರ್ಮಿಕ ವಿಭಾಗದ ಸಭೆ ಕೊಡಗು ಜಿಲ್ಲಾ ಅಧ್ಯಕ್ಷ ಗೋವಿಂದರಾಜ್ ದಾಸ್ ಆದೇಶ ಮೇರೆಗೆ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಿ.ಆರ್. ಅಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಾರ್ಮಿಕರ ಬಗ್ಗೆ ಹೋರಾಟ ಮಾಡುವುದು, ಸ್ಥಳೀಯ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವ ಸಿದ್ಧತೆಯನ್ನು ಕಾರ್ಮಿಕ ವಿಭಾಗ ಮಾಡಿಕೊಳ್ಳುವುದು, ಕೊಡಗಿನಲ್ಲಿ ರಾಜ್ಯಮಟ್ಟದ ಕಾರ್ಯಗಾರವನ್ನು ಕಾರ್ಮಿಕ ಮುಖಂಡರಿಗೆ ಏರ್ಪಡಿಸುವುದು, ಜಿಲ್ಲೆಯ ಆರು ಬ್ಲಾಕ್ ಗಳಲ್ಲಿ ಬ್ಲಾಕ್ ಸಮಿತಿಗಳ ರಚಿಸುವುದು, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳಿಗೆ ತರಬೇತಿಯನ್ನು ಆಯೋಜಿಸುವುದು ಹಾಗೂ ಮುಂತಾದ ಕಾರ್ಮಿಕರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಗೋವಿಂದರಾಜ್ ದಾಸ್ ಸಂಪೂರ್ಣ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಜಂಟಿ ಪ್ರದಾನ ಕಾರ್ಯದರ್ಶಿ ಪಾವನ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವಶಂಕರ್, ಜಿಲ್ಲಾ ಉಪಾಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಸೋಮಾರಪೇಟೆಯ ಬ್ಲಾಕ್ ಅಧ್ಯಕ್ಷ ವೇದ ಕುಮಾರ್, ಹೋಬಳಿ ಅಧ್ಯಕ್ಷರಾದ ಎಂ. ನಾಗರಾಜ್, ತಾಲೂಕು ಉಪಾಧ್ಯಕ್ಷ ಕಾಳಪ್ಪ ಹುಚ್ಚಪ್ಪ, ಮುರುಗೇಶ್, ಕಾರ್ಯದರ್ಶಿ, ಸಾಗರ್, ಚೆಲುವರಾಜ್, ನಗರ ಅಧ್ಯಕ್ಷ ರಂಗನಾಥ್ ಸಭೆಯಲ್ಲಿ ಹಾಜರಿದ್ದರು.
Back to top button
error: Content is protected !!