ಕುಶಾಲನಗರ, ನ 06:
ಜಿಲ್ಲೆಯ ಪರಿಶಿಷ್ಟ ಪಂಗಡ ಮತ್ತು ಗಿರಿಜನ ಅದಿವಾಸಿಗಳ ಕುಂದು ಕೊರತೆ, ಅರಣ್ಯ ಹಕ್ಕಿನಡಿ ಹಕ್ಕು ಪತ್ರ ವಿತರಣೆ, ಹಾಡಿಗಳಿಗೆ ಆಂಬುಲೆನ್ಸ್ ಸೇವೆ ಮುಂದುವರೆಸಲು ಸೇರಿದಂತೆ ಮೂಲಭೂತ ಸೌಕರ್ಯಗಳ ಜೊತೆಗೆ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಸಮುದಾಯ ಪ್ರಮುಖರ ನಿಯೋಗ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಮುಖಂಡರಾದ ಡಿ. ಆರ್. ಪ್ರಭಾಕರ್, ಬಿ.ಕೆ.ಮೋಹನ್, ಜೇನು ಕುರುಬರ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಕಾಶ್, ಸೋಮವಾರಪೇಟೆ ತಾಲ್ಲೂಕು ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ರವಿ, ಗ್ರಾಮ ಪಂಚಾಯತಿ ಸದಸ್ಯ ಕುಮಾರ್, ಹೇರೂರು ಸುರೇಶ್ ಮತ್ತಿತರರು ಇದ್ದರು.
Back to top button
error: Content is protected !!