ವಿಶೇಷ

ನೇತ್ರದಾನ ನೋಂದಣಿ ಮಾಡಿಸಿ ಮಾದರಿಯಾದ ಕುಶಾಲನಗರ ಗಣ್ಯ ಪ್ರತಿನಿಧಿಗಳು

ಕುಶಾಲನಗರ, ನ 06:ನೇತ್ರದಾನ ನೋಂದಣಿ ಮೂಲಕ ಮಾದರಿಯಾದ ಕುಶಾಲನಗರದ ಗಣ್ಯರು.

ದಾನಗಳಲ್ಲಿ ಇತ್ತೀಚೆಗೆ ಮಹತ್ತರ ಪಾತ್ರ ವಹಿಸಿರುವ ನೇತ್ರದಾನದ ಬಗ್ಗೆ ಜನಜಾಗೃತಿ ಎಲ್ಲೆಡೆ ಮೂಡಿಸಲಾಗುತ್ತಿದೆ.
ರಕ್ತದಾನ, ದೇಹದಾನ, ವಿದ್ಯಾದಾನಗಳಂತೆ ದೃಷ್ಟಿಹೀನರಿಗೆ ನೆರವಾಗಲು ನೇತ್ರದಾನ ಕೂಡ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಎಲ್ಲೆಡೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಒಂದು‌ ಕಣ್ದಾನದಿಂದ ಕನಿಷ್ಠ ‌ನಾಲ್ವರಿಗೆ ದೃಷ್ಟಿ ನೀಡಲು ಸಾಧ್ಯ ಎಂಬುದು ಇಂದಿನ ಆಧುನಿಕ‌ ತಂತ್ರಜ್ಞಾನದ ಮೂಲಕ ಸಾಬೀತಾಗಿದೆ. ಇದಕ್ಕೆ ಪುನಿತ್ ರಾಜ್ ಕುಮಾರ್ ಅವರ ಪ್ರಕರಣ ಸ್ಪಷ್ಟ ನಿದರ್ಶನ. ಕುಶಾಲನಗರದಲ್ಲಿ ಇತ್ರೀಚೆಗೆ ನಡೆದ ಪುನೀತ ಪರ್ವ ಕನ್ನಡೋತ್ಸವ ಕಾರ್ಯಕ್ರಮದಲ್ಲಿ‌ ನೇತ್ರದಾನ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹೆಸರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಶಿಬಿರದಲ್ಲಿ ನೇತ್ರದಾನ ನೋಂದಣಿ ಮಾಡಿಸಿ ಇತರರಿಗೆ ಮಾದರಿಯಾದರು.
ಕುಶಾಲನಗರದ ಪ್ರಥಮ ಪ್ರಜೆ ಪಪಂ ಅಧ್ಯಕ್ಷರಾದ ಬಿ.ಜೈವರ್ಧನ್, ಸದಸ್ಯರಾದ ವಿ.ಎಸ್.ಆನಂದಕುಮಾರ್, ಜಿಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ನೇತ್ರದಾನ ನೋಂದಣಿ ಮಾಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!