ಕುಶಾಲನಗರ, ನ 05: ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಅಗತ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಕುಶಾಲನಗರ ತಾಲೂಕು ತಹಶೀಲ್ದಾರ್ ಕಛೇರಿ ಆವರಣದಲ್ಲಿ ಸಂಸ್ಥೆ ತಾಲೂಕು ಅಧ್ಯಕ್ಷರೂ ಆದ ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹ ಮತ್ತು ಕೋವಿಡ್ ಸಂದರ್ಭ ಸಂಕಷ್ಟಕ್ಕೆ ಒಳಗಾದ ಬಡ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕಿಚನ್ ಸೆಟ್, ಹೈಜಿನ್ ಕಿಟ್ ಮತ್ತು ಟಾರ್ಪಲ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಟಿ.ಎಂ.ಪ್ರಕಾಶ್, ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಗಳ ಕಾಲ ಕೂಡ ರೆಡ್ ಕ್ರಾಸ್ ಸಂಸ್ಥೆ ಸೇವೆ ಒದಗಿಸುವಲ್ಲಿ ಬದ್ದವಾಗಿದೆ. ಫಲಾನುಭವಿಗಳು ತಮಗೆ ದೊರೆತ ಪರಿಕರಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ರೆಡ್ ಕ್ರಾಸ್ ಸಭಾಪತಿ ಎಸ್.ಕೆ.ಸತೀಶ್ ಮಾತನಾಡಿ, ಸಂಸ್ಥೆಯ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ಒದಗಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊಲೀಸ್ ವೃತ್ತನಿರೀಕ್ಷಕ ಮಹೇಶ್ ಮತ್ತು ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಪ್ರಮುಖರಾದ ಎಂ.ಡಿ.ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳಾಡಿದರು.
ಈ ಸಂದರ್ಭ ಸಂಸ್ಥೆಯ ಸ್ವಯಂ ಸೇವಕರಾದ ಅಮೃತ್ ರಾಜ್, ವೈಶಾಖ್, ಚಂದ್ರು, ದೇವರಾಜ್, ಸಂತೋಷ್, ವೆಂಕಟೇಶ್, ಜಿತು ಶರ್ಮ, ನಂಜುಂಡಸ್ವಾಮಿ, ಅಶೋಕ್, ಜನಾರ್ಧನ್, ಓಬುಳ ರೆಡ್ಡಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮತ್ತಿತರರು ಇದ್ದರು.
Back to top button
error: Content is protected !!