ಕುಶಾಲನಗರ, ಅ 31: ಕೊಡಗು ಜಿಲ್ಲೆಯ ಕುಶಾಲನಗರ ಸೇರಿದಂತೆ ವಿವಿಧೆಡೆ ಕನ್ನಡ ಚಲನಚಿತ್ರದ ಚಿತ್ರೀಕರಣ ಕಳೆದ ಒಂದು ವಾರದಿಂದ ಭರದಿಂದ ಸಾಗುತ್ತಿದೆ. ಓಂ ಸ್ಟುಡಿಯೋ ಪಿಂಗಾರ ಕ್ರಿಯೇಷನ್ ಲಾಂಛನ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆ ಆಧರಿಸಿ ನಿರ್ಮಾಣ ಗೊಳ್ಳುತ್ತಿರುವ ಕನ್ನಡ ಚಲನಚಿತ್ರ “ವದನ”ದಲ್ಲಿ ಜಿಲ್ಲೆಯ ಉದಯೋನ್ಮುಖ ತಾರೆ ಕುಶಾಲನಗರದ ಸಿಂಚನ ಪೊನ್ನವ್ವ ನಟಿಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ರಾಜಗೋಪಾಲ ಜೋಷಿ, ಎಸ್.ಆರ್ ಸಂದೀಪ್, ಸಿ.ಕೆ ಪ್ರಶಾಂತ್, ಶರಣ್ ಶೆಟ್ಟಿ ಮತ್ತಿತರರು ಅಭಿನಯಿಸುತ್ತಿದ್ದಾರೆ.
ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್ ಚಂದ್ರಮೋಹನ್ ಕ್ಯಾಮರಕ್ಕೆ ಚಾಲನೆ ನೀಡಿದರು. ‘ಪಿಂಗಾರ’ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆರ್. ಪ್ರೀತಂ ಶೆಟ್ಟಿ ನಿರ್ದೇಶನ ಮತ್ತು ಚಿತ್ರಕಥೆ, ಎರಡು ಬಾರಿ ಕನ್ನಡ, ತುಳು ಚಲನಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಅವಿನಾಶ್ ಶೆಟ್ಟಿ ನಿರ್ಮಾಪಕತ್ವದಲ್ಲಿ, ಶರಣ್ ಛಾಯಾಗ್ರಹಣ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆ ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ವಿಧವೆ ಹಾಗೂ ಶೋಷಿತ ವರ್ಗದ ದೌರ್ಜನ್ಯ ಮತ್ತು ಮಾನವ ದುರಾಸೆಗಳ ಬಗ್ಗೆ ಕಥಾ ವಸ್ತು ಹೊಂದಿರುವ ‘ವದನ’ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ನಿರ್ದೇಶಕರಾದ ಪ್ರೀತಂ ಶೆಟ್ಟಿ ತಿಳಿಸಿದ್ದಾರೆ.
Back to top button
error: Content is protected !!