ಕುಶಾಲನಗರ, ಅ 26: ಪಟಾಕಿ ಸಿಡಿದು ಬಾಲಕನೊಬ್ಬ ಕೈಸುಟ್ಟು ಕೊಂಡಿರುವ ಘಟನೆ ಮಂಗಳವಾರ ಸಂಜೆ ಹುಣಸೂರು ತಾಲೂಕಿನ ಕಿರಂಗೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದ ಹೇಮಂತಕುಮಾರ್ ರವರ ಪುತ್ರ ಹಿತೇಶ್(10) ಎರಡೂ ಕೈಗಳು ಸುಟ್ಟುಕೊಂಡಿರುವಾತ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಹೇಮಂತಕುಮಾರ್ ಕುಟುಂಬದವರು ಪಟಾಕಿ ಹೊಡುಯುತ್ತಿದ್ದ ವೇಳೆ ಇವರ ಪುತ್ರ ಹಿತೇಶ್ ಕೈಯಲ್ಲಿ ಸುರ್ ಸುರ್ ಬತ್ತಿ ಹಿಡಿದು ಹೂವಿನ ಕುಂಡ ಹಚ್ಚಿಸುತ್ತಿದ್ದಂತೆ ಒಮ್ಮೆಲೆ ಡಬ್ ಎಂದು ಬೆಂಕಿ ಹತ್ತಿ ಸಿಡಿದಿದೆ. ಮನೆಯವರು ಶಬ್ದ ಕೇಳಿ ಮಗನತ್ತ ನೋಡುವಷ್ಟರಲ್ಲಾಗಲೇ ಎರಡು ಕೈಗಳಲ್ಲಿ ಸುಟ್ಟಗಾಯಗಳಾಗಿದ್ದು. ತಕ್ಷಣವೇ ಹನಗೋಡು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಹಿತೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Back to top button
error: Content is protected !!