ಪ್ರಕಟಣೆ

25 ವರ್ಷಗಳ ಸಾಧನೆ ಏನೇನೂ ಇಲ್ಲ: ಈ ಬಾರಿ ಕಾಂಗ್ರೆಸ್ ಬೆಂಬಲಿಸಿ: ಚಂದ್ರಮೌಳಿ ಕೋರಿಕೆ

ಕುಶಾಲನಗರ, ಅ 23: ಬಿಜೆಪಿ ಆಡಳಿತ ದೇಶವನ್ನು ಅದಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎಸ್.ಚಂದ್ರಮೌಳಿ‌ ಆರೋಪಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದೆಡೆ ಭಾರತದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ದೇಶವನ್ನು ಅಭಿವೃದ್ದಿ ಪಥದಲ್ಲಿ‌‌ ಕೊಂಡೊಯ್ಯುವಲ್ಲಿ‌ ಬಿಜೆಪಿ ವಿಫಲವಾಗಿದೆ. ಬಹುತೇಕ ಕಾಂಗ್ರೆಸ್ ನ‌ ಕೊಡುಗೆಗಳನ್ನು ತನ್ನ ಸಾಧನೆ ಎಂಬಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದರು.
ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುರುಪು ಮೂಡಿದೆ. ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ತುಂಬಿದೆ. ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ಮುಂಬರುವ ಚುನಾವಣೆಯಲ್ಲಿ ಸಾಧನೆ‌ ಮಾಡಲಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು‌ ಪ್ರಧಾನಿಯಾಗುವ ಅವಕಾಶವೂ ಇದೆ ಎಂದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜನಮಾನಸವನ್ನು ಆಕ್ರಮಿಸಿದೆ. ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ರಾಜ್ಯದಲ್ಲಿ ಸಿದ್ದರಾಮೋತ್ಸವ, ಡಿಕೆಶಿಯವರ ಮೇಕೆದಾಟು‌ ಪಾದಯಾತ್ರೆ ಕೂಡ ರಾಜ್ಯದ ಜನರನ್ನು ಆಕರ್ಷಿಸಿದೆ. ಈ ಎಲ್ಲಾ ಅಂಶಗಳು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಾಧಕವಾಗಲಿದೆ ಎಂದರು.
ಕೊಡಗಿನಲ್ಲಿ‌ ಕೂಡ ಶಾಶಕದ್ವರ ಸಾಧನೆ ಏನೇನೂ‌ ಇಲ್ಲ. ಒಂದು ಉತ್ತಮ‌ ಸುಸಜ್ಜಿತ ಆಸ್ಪತ್ರೆ ಅಗತ್ಯತೆಯ ಬೇಡಿಕೆ‌ ಇದುವರೆಗೂ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಅರೋಪಿಸಿದರು. ಮಡಿಕೇರಿ‌ ಕ್ಷೇತ್ರದ ಜನತೆ ಕಾಂಗ್ರೆಸ್ ಗೆ ಒಂದು ಅವಕಾಶ ನೀಡಬೇಕು ಎಂದು ಕೋರಿದ ಅವರು, ಕಳೆದ 25 ವರ್ಷಗಳಿಂದ ಅಪ್ಪಚ್ಚುರಂಜನ್ ಅವರನ್ನೇ ಆರಿಸುತ್ತಿರುವ ಮತದಾರರು ಈ‌ ಬಾರಿ ಕಾಂಗ್ರೆಸ್ ಗೆ ಅಧಿಕಾರ ನೀಡುವಂತೆ ಕೋರಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ‌ ಜಿ.ಎಂ.ಕಾಂತರಾಜು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!