ಪ್ರಕಟಣೆ
ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆಯಿಂದ, ಸಾಮರಸ್ಯದ ದೀಪ ಕಾರ್ಯಕ್ರಮ

ಕುಶಾಲನಗರ, ಅ 23:ಕುಶಾಲನಗರ ದೇವಾಲಯಗಳ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆ ವತಿಯಿಂದ, ದೀಪಾವಳಿ ಪ್ರಯುಕ್ತ ಸಾಮರಸ್ಯದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಸಮಾಜದ ಸಹಬಾಗಿತ್ವದೊಂದಿಗೆ, ಸಮಾಜದ ಜನರನ್ನೊಳಗೊಂಡು ಸೇವಾಬಸ್ತಿಯಲ್ಲಿ ಆಚರಿಸುವ ಹೃದಯ ಸ್ಪರ್ಶಿ ಕಾರ್ಯಕ್ರಮ ದೀಪಾವಳಿ ಹಬ್ಬವನ್ನು ಕುಶಾಲನಗರದ ಮಹಾ ಗಣಪತಿ ದೇವಾಲಯದ ಗರ್ಭ ಗುಡಿಯಿಂದ ಪ್ರಾರ್ಥಿಸಿ ಕೊಟ್ಟ ನಂದಾ ದೀಪವನ್ನು ದೀವಟಿಗೆ, ಕೊಂಬು, ಚಂಡೆ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡು ಬಸ್ಥಿಯಲ್ಲಿ ಸ್ಥಾಪಿಸಿದ ದೀಪದಿಂದ ಮನೆ – ಮನೆಗಳ ದೀಪ ಬೆಳಗುವ ಕಾರ್ಯಕ್ರಮ ಇದಾಗಿದೆ. ಇದೇ ಅಕ್ಟೋಬರ್ 24ರ ಸೋಮವಾರ ಸಂಜೆ 5 ಗಂಟೆಯಿಂದ ಕುಶಾಲನಗರದ ಗಣಪತಿ ದೇವಾಲಯದಿಂದ ಆರಂಭವಾಗಿ ಕಾಳಮ್ಮ ಕಾಲೋನಿಯ ರಾಮ ಮಂದಿರದ ಸೇವಾಬಸ್ತಿಯಲ್ಲಿ ಸಾಮರಸ್ಯದ ದೀಪ ಬೆಳಗುವ ಮೂಲಕ ದೀಪಾವಳಿ ಆಚರಣೆ ನಡೆಯಲಿದೆ.