ಆರೋಪ

ಗುಡ್ಡೆಹೊಸೂರಿನಲ್ಲೊಂದು ಗುಡೆಹೊಸೂರು: ಅಕ್ಷರ ಲೋಪದ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯವಸ್ಥೆಗೆ ಆಕ್ರೋಷ

ಕುಶಾಲನಗರ, ಅ 21:ಗುಡ್ಡೆಹೊಸುರು- ಸಿದ್ದಾಪುರ ಮಾರ್ಗದಲ್ಲಿ ಕಳೆದ 5 ತಿಂಗಳ ಹಿಂದೆ 3 ಕಿಮೀ ಉದ್ದಕ್ಕೆ ಕಾಂಕ್ರಿಟ್ ರಸ್ತೆಯನ್ನು ಮಾಡಲಾಗಿತ್ತು. ರಸ್ತೆ ಕಾಮಗಾರಿ ನಡೆಸಿದ ವ್ಯಾಪ್ತಿಗೆ ಬರುವ ಗ್ರಾಮಗಳ ನಾಮಫಲಕವನ್ನು ನೂತನವಾಗಿ ಅಳವಡಿಸಲಾಗಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಗುಡ್ಡೆಹೊಸೂರು ಗ್ರಾಮದ ನಾಮಫಲಕ ಈ ರೀತಿಯಾಗಿದೆ. ಕೇರಳದಲ್ಲಿ ಕನ್ನಡ ಬಳಕೆ ಮಾದರಿಯಲ್ಲಿ ಕನ್ನಡ ನಾಡಿನ ನಾಮಫಲಕದಲ್ಲಿ ಆದ ಲೋಪದ ಬಗ್ಗೆ ಸ್ಥಳೀಯರು ಗುತ್ತಿಗೆದಾರರು, ಸಿಬ್ಬಂದಿಗಳ ಗಮನಕ್ಕೂ ತರಲಾಗಿದೆ. ಆದರೆ ಬರವಣಿಗೆಯಲ್ಲಾದ ತಪ್ಪಿನ ಬಗ್ಗೆ ತಿಳಿಸಿದರು ಸರಿಪಡಿಸುವ ಕಾರ್ಯವನ್ನು ಇದುವರೆಗೆ ಮಾಡಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ “ಗುಡೆ” ಅಂದರೆ ಬಿದಿರಿನ ಕುಕ್ಕೆ, ಆದರೆ ಅರೆಭಾಷೆಯಲ್ಲಿ ಗುಡೆ ಅಂದರೆ ‘ಹುಡಗಿ” ಎಂದರ್ಥ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ರೀತಿಯ ಲೋಪಗಳನ್ನು ಸರಿಪಡಿಸಲಿ. ಕನ್ನಡಕ್ಕಾದ ಅವಮಾನವನ್ನು ಸರಿಪಡಿಸಲಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!