ಕ್ರೈಂ

ಚಿಕ್ಲಿಹೊಳೆ ಡ್ಯಾಂ‌ ಬಳಿ ಕಟುಕರಿಂದ ಹೋರಿಯ ಮಾರಣ ಹೋಮ: ಮತ್ತೆರೆಡು ರಾಸು ಗಂಭೀರ

ಕುಶಾಲನಗರ, ಅ 21: ಚಿಕ್ಲಿಹೊಳೆ ಜಲಾಶಯ ಬಳಿ ನಿವಾಸಿ ಹೊಸೊಕ್ಲು ಗಣೇಶ್ (ಗಣಿ) ಎಂಬವರ ಹೋರಿಯನ್ನು ಕೊಂದು ಮಾಂಸ ಕೊಂಡೊಯ್ದು ಘಟನೆ ನಡೆದಿದೆ. ಇವರಿಗೆ ಸೇರಿದ ಮತ್ತೆರೆಡು ಹೋರಿಗಳನ್ನು ಕೂಡ ಸಾಯಿಸುವ ಪ್ರಯತ್ನ ನಡೆಸಿ ವಿಫಲರಾದ ಕಾರಣ ಆ ಎರಡು ಹೋರಿಗಳು ಗಂಭಿರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿವೆ. ಒಂದು ಹೋರಿ ಕೊಂದು ತಲೆ,‌ಕಾಲುಗಳನ್ನು ಬೇರ್ಪಡಿಸಿ ಮಾಂಸ ಕೊಂಡೊಯ್ದಿದ್ದು ಈ ಘಟನೆ ಬಗ್ಗೆ ಸಾರ್ವಜನಿಕರ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು ಹತ್ಯೆಗೈದು ಕಟುಕರ ಪತ್ತೆಗೆ ಗ್ರಾಮಸ್ಥರು ಪಣತೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!