ಕುಶಾಲನಗರ, ನ 11: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಕ್ತ ಕನಕದಾಸ ಸೇವಾ ಸಮಿತಿಯ ವತಿಯಿಂದ ಭುವನಗಿರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಸೀಗೆಹೊಸೂರು ವಿಭಾಗದ ಗ್ರಾಮ ಪಂಚಾಯತಿ ಸದಸ್ಯ ಅನಂತ್ ಚಾಲನೆ ನೀಡಿದರು.
ಈ ಸಂದರ್ಭ ಭಕ್ತ ಕನಕದಾಸ ಸೇವಾ ಸಮಿತಿಯ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಚಂದ್ರು, ಸಮಿತಿಯ ಸದಸ್ಯರಾದ ವಿರೂಪಾಕ್ಷ, ಕುಮಾರ್, ಸುಬ್ರಹ್ಮಣಿ, ಧರ್ಮ, ಮಹದೇವ, ಶೇಖರ್, ಗಿಡ್ಡಪ್ಪ, ನಿಂಗಾರಾಜು ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು.
Back to top button
error: Content is protected !!