ಅವ್ಯವಸ್ಥೆ

ಕೆರೆಯಿದೆ, ನೀರಿದೆ: ಸರಕಾರಿ ದಾಖಲೆಗಳಲ್ಲಿ ಕೆರೆ ಮಾಯ: ರೊಂಡಕೆರೆ ಖಾಸಗಿ ಪಾಲು

ಆರ್ ಟಿ ಸಿಯಲ್ಲಿ ಕೆರೆ ಬದಲಿಗೆ ಖಾಸಗಿ ವ್ಯಕ್ತಿ ಹೆಸರು ಪತ್ತೆ

ಕುಶಾಲನಗರ, ಅ 06: ಹತ್ತಾರು ಎಕರೆ ಪ್ರದೇಶದಲ್ಲಿದ್ದ ಕೆರೆ ಒಂದೆಡೆ ಒತ್ತುವರಿಯಾಗಿದ್ದರೆ ಮತ್ತೊಂದೆಡೆ ಸರಕಾರಿ ದಾಖಲೆಯಲ್ಲಿ‌ ಕೆರೆಯ ಅಸ್ತಿತ್ವವೇ ಮಾಯವಾದ ಘಟನೆ‌ ನಡೆದಿದೆ. ಮುಳ್ಳುಸೋಗೆ ಗ್ರಾಪಂ‌ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿರುವ ರೊಂಡಕೆರೆ ಜಮಾಬಂದಿ ಪ್ರಕಾರ 14-16 ಎಕರೆ ವಿಸ್ತೀರ್ಣ ತೋರಿಸುತ್ತಿದೆ. ಬಹುಪಾಲು ಒತ್ತುವರಿಯಾಗಿರುವ ಕೆರೆ ನಕ್ಷೆಯಲ್ಲಿ‌ ಕೇವಲ‌ 3.41 ಎಕರೆ ತೋರಿಸುತ್ತಿದೆ. ಅದೂ ಕೂಡ ಖಾಸಗಿ ವ್ಯಕ್ತಿಯ ಹೆಸರಿನಲ್ಲಿದೆ. ಇತ್ತೀಚಿನ‌ ಆರ್ ಟಿಸಿ ಯಲ್ಲಿ ಕೆರೆ ಬದಲಾಗಿ ಖಾಸಗಿ ವ್ಯಕ್ತಿಯ ಹೆಸರು ನಮೂದಾಗಿದೆ ಎಂಬುದು ತಿಳಿದುಬಂದಿದೆ. ಈ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!