ವಿಶೇಷ

ಅಲ್ಲಿ ಕೇರೆ ಇಲ್ಲಿ ನಾಗರ. ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ

ಕುಶಾಲನಗರ, ಅ 04: ಹುಣಸೂರು ನಗರದ ಉರಗ ಪ್ರೇಮಿ ಎರಡು ಮನೆಗಳಲ್ಲಿ ಸೇರಿಕೊಂಡಿದ್ದ ಎರಡು ಹಾವುಗಳನ್ನು ಒಂದು ಗಂಟೆ ಅಂತರದಲ್ಲಿ ಸಂರಕ್ಷಿಸಿದರು.
ನಗರದ ಮಂಜುನಾಥ ಬಡಾವಣೆಯ ಸಾಯಿ ಬಾಬ ಮಂದಿರದ ಪಕ್ಕದಲ್ಲಿರುವ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ರವರ ಚಿಕ್ಕಪ್ಪ ರಮೇಶ‌ಬಾಬು ರವರ ಮನೆ ಸೇರಿಕೊಂಡಿದ್ದ ಕೇರೆ ಹಾವನ್ನು ತಮ್ಮ ಮಕ್ಕಳಾದ ಚಂದ್ರಮೌಳಿ. ಶ್ರೀಹರಿಯವರ ಮೊಬೈಲ್ ಬೆಳಕಿನಲ್ಲೇ ಸೆರೆ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬೈಕ್ ಏರಿ ಹೊರಟು ನಗರಕ್ಕೆ ಸಮೀಪದ ಮೂಕನಹಳ್ಳಿ ಕೆರೆ ಬಳಿ ಬಂಧ‌ಮುಕ್ತಗೊಳಿಸಿ ಬಂದ ಅರ್ದ ಗಂಟೆಯಲ್ಲೇ ಹೌಸಿಂಗ್ ಬೋಡ್ ೯ನಿವಾಸಿ ನಾಗ ಚೈತನ್ಯ ರವರ ಮನೆ ಮುಂದೆ ಬಾಗಿಲ ಬಳಿಯೇ ಇರುವ ನೀರಿನ ಸಂಪ್ ಬಳಿಯಲ್ಲಿ ಮಾರುದ್ದದ‌ ಹಾವು ಸೇರಿಕೊಂಡಿದೆ ಎಂಬ ಕರೆಯ ಮೇರೆಗೆ ತಕ್ಷಣವೇ ಮಗನೊಂದಿಗೆ ಸ್ಕೂಟರ್ ಏರಿ ಹೊರಟ ಗುರುರಾಜ್ ಕಣ್ಣಿಗೆ ಅಲ್ಲಿ ಕಾಣಿಸಿದ್ದು ಗೋದಿ ನಾಗರ ಹಾವು ನೀರು ಹರಿದು ಹೋಗಲು ಹಾಕಿದ್ದ ಚೇಬರ್ ನ ಜಾಲರಿಯಲ್ಲಿ ಸಿಕ್ಕಿ ಹಾಕಿಕೊಂಡು ಒಳಕ್ಕೂ ಹೋಗಲಾಗದೆ ಇತ್ತ ಹೊರಬರಲಾಗದೆ ಒದ್ದಾಡುತ್ತಿತ್ತು. ಹಾವಿನ ಬಾಲ ಹಿಡಿದು ಮೇಲೆತ್ತಿ ಇದು ನಾಗರ ಹಾವೆಂದು ಖಚಿತವಾಗುತ್ತಿದ್ದಂತೆ ಮನೆಯವರು ಗಾಬರಿಗೊಂಡಿದ್ದರು.
ಮನೆಯವರಿಗೆ ದೈರ್ಯ ಹೇಳಿದ ಗುರುರಾಜ್ ಮೊದಲು ಜಾಲರಿಯನ್ನು ಹಾರೆಯಿಂದ ಕಿತ್ತು ಹಾಕಿ ಹಾವು ಚೇಂಬರ್ ನಿಂದ ಹರಿದು ಹೊರ ಬರಲು ಅವಕಾಶ ಮಾಡಿಕೊಟ್ಟರಾದರೂ ಜಾಲರಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವು ಕೊನೆಗೂ ಜೀವ ಉಳಿಸಿಕೊಂಡು ಹೊರಬರದೆ ಗಾಬರಿಯಿಂದ ಪೈಪ್ ನಲ್ಲೇ ಸೇರಿಕೊಂಡಿತ್ತು. ನೀರು ಹಾಕುತ್ತಿದ್ದಂತೆ ಮತ್ತೊಂದು‌ಕಡೆಯಿಂದ ಇಣುಕುತ್ತಿದ್ದ ಹಾವನ್ನು ಹಿಡಿದು ಹೊರಟ ಗುರುರಾಜ್ ರಿಗೆ ಮನೆಯವರು ಕೃತಜ್ಞತೆ ಸಲ್ಲಿಸಿದರು.
ಹಾವುಗಳನ್ನು ಸಂರಕ್ಷಣೆ ಮಾಡಿದ ಸಂತೃಪ್ತಿಯಿಂದ ಗುರುರಾಜ್ ಮನೆ ಕಡೆಗೆ ಸ್ಕೂರಟ್ ಏರಿ ಹೊರಟರು.

Related Articles

Leave a Reply

Your email address will not be published. Required fields are marked *

Back to top button
error: Content is protected !!